ದೆಹಲಿ ಸೇನಾ ಮುಖ್ಯ ಕಚೇರಿಯಲ್ಲಿ 'ಸೀಮಿತ ದಾಳಿ' ನೇರಪ್ರಸಾರ ಮಾಡಲಾಗಿತ್ತು: ಅಧಿಕಾರಿ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಯ ನೇರ ಪ್ರಸಾರವನ್ನು ದೆಹಲಿ ಮತ್ತು ಉಧಂಪುರದಲ್ಲಿರುವ ಸೇನಾ ಮುಖ್ಯ ಕಾರ್ಯಾಲಯದಲ್ಲಿ ಮಾಡಲಾಗಿತ್ತು ಎಂದು ಸೀಮಿತ ದಾಳಿಯ ಉಸ್ತವಾರಿ ಹೊತ್ತಿದ್ದ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಯ ನೇರ ಪ್ರಸಾರವನ್ನು ದೆಹಲಿ ಮತ್ತು ಉಧಂಪುರದಲ್ಲಿರುವ ಸೇನಾ ಮುಖ್ಯ ಕಾರ್ಯಾಲಯದಲ್ಲಿ ಮಾಡಲಾಗಿತ್ತು ಎಂದು ಸೀಮಿತ ದಾಳಿಯ ಉಸ್ತವಾರಿ ಹೊತ್ತಿದ್ದ ಅಧಿಕಾರಿ ಶುಕ್ರವಾರ ಹೇಳಿದ್ದಾರೆ. 

ಖಾಸಗಿ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸೀಮಿತಿ ದಾಳಿಯ ನೇರಪ್ರಸಾರವನ್ನು ರಾಜಧಾನಿ ದೆಹಲಿ ಮತ್ತು ಉಧಂಪುರದಲ್ಲಿರುವ ಸೇನಾ ಮುಖ್ಯಕಾರ್ಯಾಲಯಕ್ಕೆಮಾಡಲಾಗಿತ್ತು ಎಂದು ಹೇಳಿದ್ದಾರೆ.

ಸೀಮಿತ ದಾಳಿಯ ಚಿತ್ರಗಳು ನಮಗೆ ನೇರವಾಗಿ ದೊರೆಯುತ್ತಿದ್ದವು. ಉಧಂಪುರದಲ್ಲಿನ ನಮ್ಮ ಕಮಾಂಡ್ ಮುಖ್ಯ ಕಾರ್ಯಾಲಯದ ಕೊಠಡಿಯಲ್ಲಿ ಕುಳಿತು ನಾನು ಸಂಪೂರ್ಣ ಕಾರ್ಯಾಚರಣೆಯ ದೃಶ್ಯಾವಳಿಗಳನ್ನು ವೀಕ್ಷಿಸಿದ್ದೆ ಎಂದು ತಿಳಿಸಿದ್ದಾರೆ. ಆದರೆ, ಇದರ ನೇರ ಪ್ರಸಾರವನ್ನು ಉಪಗ್ರಹದ ಮುಖಾಯಂತ ಬೇರೆ ಯಾವ ತಂತ್ರಜ್ಞಾನದ ಮುಖಾಂತರ ನಡೆಸಲಾಗಿತ್ತು ಎಂಬುದನ್ನು ಮಾತ್ರ ಅವರು ಬಹಿರಂದ ಪಡಿಸಿದ್ದ. ಈ ರೀತಿಯ ಮಾಡುವ ಸಾಮರ್ಥ್ಯ ಭಾರತೀಯ ಸೇನೆಗಿದೆ ಎಂದು ತಿಳಿಸಿದ್ದಾರೆ. 

ಸೀಮಿತ ದಾಳಿಕೆ ತೆರಳಿದ್ದ ಕೊನೆಯ ತಂಡ ಬೆಳಿಗ್ಗೆ 6.30 ಗಂಟೆ ಸುಮಾರಿಗೆ ಹಿಂತಿರುಗಿತ್ತು. ಕೆಲವು ತಂಡಗಳು ಬೇಗ ತೆರಳಿ ಗುರಿಯಂತೆ ದಾಳಿ ನಡೆಸಿ ಹಿಂತಿರುಗಿ ಬಂದಿತ್ತು. ಇನ್ನೂ ಕೆಲವು ತಂಡಗಳು ತಡವಾಗಿ ತೆರಳಿ ತಡವಾಗಿ ಹಿಂತಿರುಗಿದ್ದವು ಎಂದಿದ್ದಾರೆ. 

ಸೇನೆ ನಡೆಸಿದ್ದ ಸೀಮಿತ ದಾಳಿಯಿಂದಾಗಿ ಪಾಕಿಸ್ತಾನ ಪಡೆಗಳಲ್ಲಿ ಆಂತಕ ಮೂಡಿತ್ತು. ದಾಳಿ ವೇಳೆ ಪಾಕಿಸ್ತಾನ ಸೇನೆ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದರು. ಎಲ್ಲಕ್ಕೂ ಸೇನೆ ಸಿದ್ಧವಾಗಿತ್ತು. ಇದರಂತೆ ಬ್ಯಾಕ್-ಅಪ್ ತಂಡಗಳಿದ್ದವು. ಯಾವುದೇ ತಂಡ ದಾಳಿ ನಡೆಸಿ ಹಿಂದಿರುಗಲು ವಿಫಲವಾದರೆ, ತೊಂದರೆಯಲ್ಲಿದ್ದರೆ ಕೂಡಲೇ ಅಲ್ಲಿಗೆ ಹೋಗಿ ಅವರನ್ನು ರಕ್ಷಣೆ ಮಾಡಲು ಮತ್ತೊಂದು ತಂಡ ಸಿದ್ಧವಿರುತ್ತಿತ್ತು. 

ಸೀಮಿತ ದಾಳಿ ಕುರಿತಂತೆ ಮಾಹಿತಿ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿತ್ತು. ಕಾರ್ಯಾಚರಣೆ ಅಂತ್ಯವಾಗುತ್ತಿದ್ದಂತೆಯೇ ಈ ಬಗ್ಗೆ ಹೇಳಿಕೆ ನೀಡಲು ಸರ್ಕಾರ ಸಿದ್ಧವಾಗಿತ್ತು. ಕಾರ್ಯಾಚರಣೆ ವಿಫಲವಾದರೂ ಟೀಕೆಗಳನ್ನು ಎದುರಿಸಲು ಸರ್ಕಾರ ಸಿದ್ಧವಾಗಬೇಕಿತ್ತು. ಹೀಗಿರುವಾಗ ಕಾರ್ಯಾಚರಣೆ ಯಶಸ್ವಿಗೊಳಿಸಲು ಸೇನೆ ಮೇಲೆ ಹೆಚ್ಚಿನ ಒತ್ತಡವಿತ್ತು. 

4-6 ಉಗ್ರರ ನೆಲೆಗಳಿಗೆ ಸಾಕಷ್ಟು ಹಾನಿಗಳಾಗಿತ್ತು. ಸೀಮಿತ ದಾಳಿ ನಡೆಸಲು ಒಂದು ದಿನ ವಿಳಂಬ ಮಾಡಿದ್ದು ನಿಜ. ಆರಂಭದಲ್ಲಿ ಸೆ.27 ರಂದು ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು. ಆದರೂ ಅದನ್ನು ಸೆ.28ರಂದು ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com