ತಮಿಳುನಾಡು, ಬಿಹಾರ ಸೇರಿ ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕ

ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಲೆ. ಗವರ್ನರ್ ನ್ನು ನೇಮಕ ಮಾಡಿದ್ದಾರೆ.
ಬನ್ವಾರಿಲಾಲ್ ಪುರೋಹಿತ್
ಬನ್ವಾರಿಲಾಲ್ ಪುರೋಹಿತ್
ನವದೆಹಲಿ: ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಲೆ. ಗವರ್ನರ್ ನ್ನು ನೇಮಕ ಮಾಡಿದ್ದಾರೆ.
ಅಸ್ಸಾಂನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಜಗದೀಶ್ ಮುಖಿ ಅವರನ್ನು ಅಸ್ಸಾಂ ರಾಜ್ಯಪಾಲರಾಗಿ ನೇಮಿಸಲಾಗಿದೆ. ಅಡ್ಮಿರಲ್ (ನಿವೃತ್ತ) ದೇವೇಂದ್ರಕುಮಾರ್ ಜೋಶಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆ.ಗವರ್ನರ್ ಆಗಿ ನೇಮಕ ಆಗಿದ್ದಾರೆ.
ಇನ್ನು ಅರುಣಾಚಲ ಪ್ರದೇಶ, ಬ್ರಿಗೇಡಿಯರ್ (ಡಾ.) ಬಿಡಿ ಮಿಶ್ರಾ (ನಿವೃತ್ತ) , ಸತ್ಯ ಪಾಲ್ ಮಲಿಕ್ ಬಿಹಾರ, ಮೇಘಾಲಯಕ್ಕೆ ಗಂಗಾ ಪ್ರಸಾದ್ ಹೊಸ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.
ನೂತನ ರಾಜ್ಯಪಾಲರ ಕಿರು ಪರಿಚಯ
ಅಸ್ಸಾಂನ ರಾಜ್ಯಪಾಲರಾಗಿದ್ದ ಬನ್ವಿವಾಲ್ ಪುರೋಹಿತ್ ಅವರೀಗ ತಮಿಳುನಾಡಿನ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ರಾಜ್ಯದ ಆಡಳಿತ ಪಕ್ಷದೊಳಗಿನ ಸಂಘರ್ಷಗಳಿಗೆ ಸಂಬಂಧಿಸಿ, ತಮಿಳುನಾಡಿನಲ್ಲಿ ರಾಜ್ಯಪಾಲರ ಪಾತ್ರ ಅತ್ಯಂತ ಮುಖ್ಯವಾದುದು. ಪುರೋಹಿತ್ ಅವರು ಇದುವರೆಗೆ ರಾಜ್ಯಪಾಲರಾಗಿದ್ದ ವಿದ್ಯಾಸಾಗರ ರಾವ್ ಅವರ ಸ್ಥಾನ ತುಂಬಲಿದ್ದಾರೆ.

ಪ್ರಸ್ತುತ  ಅಂಡಮಾನ್ ಮತ್ತು ನಿಕಬಾರ್ ದ್ವೀಪಗಳ ಲೆ.ಗವರ್ನರ್ ಪ್ರೊಫೆಸರ್ ಜಗದೀಶ್ ಮುಖಿ, ಅಸ್ಸಾಂ ನ ರಾಜ್ಯಪಾಲ ಹುದ್ದೆಗೇರಿದ್ದಾರೆ.  ಹಿರಿಯ ಬಿಜೆಪಿ ನಾಯಕ ಮುಖಿ ಹಿಂದೆ ದೆಹಲಿ ಸರ್ಕಾರದಲ್ಲಿ ಹಣಕಾಸು, ಯೋಜನೆ, ಎಕ್ಸೈಸ್ ಅಂಡ್ ಟ್ಯಾಕ್ಸ್ ಮತ್ತು ಉನ್ನತ ಶಿಕ್ಷಣದಂತಹ ವಿವಿಧ ಖಾತೆಗಳನ್ನು ನಿಭಾಯಿಸಿದ್ದರು. ದೆಹಲಿ ವಿಧಾನಸಭೆಯಲ್ಲಿ ಸುಮಾರು 10 ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ ಪಕ್ಷವನ್ನು ಮುನ್ನಡೆಸಿದರು.

ಅಡ್ಮಿರಲ್ ದೇವೇಂದ್ರಕುಮಾರ್ ಜೋಷಿ ಅವರು ಅಂಡಮಾನ್ ಮತ್ತು ನಿಕಾಬಾರ್ ದ್ವೀಪಗಳ ಲೆ. ಗವರ್ನರ್ ಆಗಿ ನೇಮಕ ಆಗಲಿದ್ದಾರೆ. ಇವರು ಆಗಸ್ಟ್ 31, 2012 ರಿಂದ 26 ಫೆಬ್ರವರಿ 2014 ರವರೆಗೆ ನೌಕಾ ಸಿಬ್ಬಂದಿ ಗಳ ಮುಖ್ಯಸ್ಥರಾಗಿದ್ದರು. ಜೋಶಿಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಯುದ್ಧ ಸೇವಾ ಪದಕ, ನೌ ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕ ಇವರಿಗೆ ಲಭಿಸಿದೆ. ಅವರು 1996 ರಿಂದ 1999 ರವರೆಗೆ ಸಿಂಗಪುರದ ಭಾರತೀಯ ಹೈ ಕಮಿಷನ್ ನಲ್ಲಿ ರಕ್ಷಣಾ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.

ಬಿಹಾರದ ಹಿರಿಯ ಬಿಜೆಪಿ ಮುಖಂಡ ಗಂಗಾ ಪ್ರಸಾದ್ ಅವರು ವಿವಿಧ ಹುದ್ದೆಗಳಲ್ಲಿದ್ದು  ಪಕ್ಷದ ಸೇವೆ ಮಾಡಿದ್ದಾರೆ. ಪ್ರಸ್ತುತ ಅವರು ಮೇಘಾಲಯ ರಾಜ್ಯಪಾಲರಾಗಿ ಆಗಿ ನೇಮಕಗೊಂಡಿದ್ದಾರೆ. 18 ವರ್ಷಗಳಿಂದ ಪ್ರಸಾದ್ ಅವರು ಬಿಹಾರದ ರಾಜ್ಯಸಭಾ ಸಂಸದ ಆಗಿದ್ದರು. ಅದರಲ್ಲಿ ಐದು ವರ್ಷಗಳಕಾಲ ಅವರು ಎಂಎಲ್ಸಿ ಆಗಿ ವಿರೋಧ ಪಕ್ಷವನ್ನು ಮುನ್ನಡೆಸಿದರು.

ಬ್ರಿಗೇಡಿಯರ್. (ಡಾ) ಬಿ.ಡಿ. ಮಿಶ್ರಾ (ನಿವೃತ್ತ), ಅವರು ವಿವಿಧ ಯುದ್ಧಗಳಲ್ಲಿ ಭಾಗವಹಿಸಿದ್ದಾರೆ ಮತ್ತು ವಿವಿಧ ರಾಶ್ಟ್ರೀಯ ವಿಪತ್ತು ಕಾರ್ಯಾಚರಣೆಯ ಲ್ಲಿ ಪಾತ್ರವಹಿಸಿದ್ದಾರೆ, ಅರುಣಾಚಲ ಪ್ರದೇಶದ ರಾಜ್ಯಪಾಲ ಹುದ್ದೆಗೇರಲಿರುವ ಮಿಶ್ರಾ  ಡಿಸೆಂಬರ್ 31, 1995 ರಂದು ಭಾರತೀಯ ಸೈನ್ಯದಿಂದ ನಿವೃತ್ತರಾದರು,

ಮಾಜಿ ಕೇಂದ್ರ ಸಚಿವ ಸತ್ಯಪಾಲ್ ಮಲಿಕ್ ಬಿಹಾರದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಮಲಿಕ್ ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಅನೇಕ ಪ್ರಮುಖ ಸ್ಥಾನಗಳನ್ನು ನಿಭಾಯಿಸಿದ್ದಾರೆ. ಅವರು 1980 ರಿಂದ 1984 ರವರೆಗೆ 1986 ರಿಂದ 1989 ರವರೆಗೆ ಎರಡು ಅವಧಿಗಳಲ್ಲಿ ಸಂಸತ್ತಿನ (ರಾಜ್ಯಸಭೆ) ದಸ್ಯರಾಗಿದ್ದಾರೆ.  ಅವರು 1989 ರಿಂದ 1990 ರವರೆಗೆ ಸಂಸತ್ತಿನ ಲೋಕಸಭೆಯ ಸದಸ್ಯರಾಗಿದ್ದರು. ಮಲಿಕ್ ಅವರು 1974 ರಿಂದ 1977 ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಯ ಸದಸ್ಯರಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com