ದುರ್ಗಾ ಮೆರವಣಿಗೆ ವೇಳೆ ಅವಘಡ, ದೆಹಲಿಯ ವಿವಿಧೆಡೆ 7 ಮಂದಿ ಜಲಸಮಾಧಿ

ನವರಾತ್ರಿ ಹಬ್ಬದ ಕಡೆಯ ದಿನ, ನಿನ್ನೆ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೆಹಲಿಯ ವಿವಿಧೆಡೆ ಸಂಭವಿಸಿದ ದುರಂತಗಳಲ್ಲಿ ಏಳು ಮಂದಿ ಜಲ ಸಮಾಧಿಯಾಗಿದ್ದಾರೆ.
ದುರ್ಗಾ ಮೆರವಣಿಗೆ ವೇಳೆ ಅವಘಡ, ದೆಹಲಿಯ ವಿವಿಧೆಡೆ 7 ಮಂದಿ ಜಲಸಮಾಧಿ
ದುರ್ಗಾ ಮೆರವಣಿಗೆ ವೇಳೆ ಅವಘಡ, ದೆಹಲಿಯ ವಿವಿಧೆಡೆ 7 ಮಂದಿ ಜಲಸಮಾಧಿ
ನವದೆಹಲಿ: ನವರಾತ್ರಿ ಹಬ್ಬದ ಕಡೆಯ ದಿನ, ನಿನ್ನೆ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೆಹಲಿಯ ವಿವಿಧೆಡೆ ಸಂಭವಿಸಿದ ದುರಂತಗಳಲ್ಲಿ ಏಳು ಮಂದಿ ಜಲ ಸಮಾಧಿಯಾಗಿದ್ದಾರೆ. 
ಆರು ಮೃತ ದೇಹಗಳನ್ನು ಈಗಾಗಲೇ  ನೀರಿನಿಂದ ಹೊರ ತೆಗೆಯಲಾಗಿದ್ದು  ಈಶಾನ್ಯ ದೆಹಲಿಯ ಸೋನಿಯಾ ವಿಹಾರದ ಚೌತನ್ ಪಟ್ಟಿಯ ಯಮುನಾ ದಂಡೆಯಲ್ಲಿ ದುರ್ಗಾ ವಿಸರ್ಜನೆ ಸಂದರ್ಭದಲ್ಲಿ 13 ವರ್ಷದ ಬಾಲಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. 
ಬಾಲಕ ಹಿಮಾಂಶು ಮತ್ತು ಆತನ ಸ್ನೇಹಿತ ನೀರಿನಲ್ಲಿ ಕೊಚ್ಚಿ ಹೋಗಿರುವುದಾಗಿ ಶೋಧ ಕಾರ್ಯದಲ್ಲಿ ನಿರತರಾದ ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಇನ್ನು ದೆಹಲಿ ಹೊರವಲಯದ ಪಲ್ಲಾ ಬಳಿ ಯಮುನಾ ನದಿಯಲ್ಲಿ ನಡೆಯುತ್ತಿದ್ದ ನವರಾತ್ರಿ  ಉತ್ಸವದಲ್ಲಿ ಭಾಗವಹಿಸಿದ್ದ ನಾಲ್ವರು ಯುವಕರು ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾರೆ,  ಜತೆಗೆ ದೆಹಲಿಯ  ಚೌತನ್ ಪಟ್ಟಿಯಲ್ಲಿ ಅಪರಿಚಿತ ಯುವತಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.   
ಇದೇ ಸೆ.3 ರಂದು ಗಣೇಶ ವಿಸರ್ಜನೆ ಸಮಯದಲ್ಲಿ ನಾಲ್ವರು ಯುವಕರು ಯಮುನೆಯಲ್ಲಿ ಜಲಸಮಾಧಿಯಾದ ದುರಂತವನ್ನು ನಾವಿಲ್ಲಿ ನೆನೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com