ದೇಶಭಕ್ತಿ ಕುರಿತು ನಮಗೆ ಪಾಠ ಮಾಡಬೇಡಿ, ನಿಮ್ಮ ಹಿಂದುತ್ವ ವಾದವನ್ನು ಸ್ಪಷ್ಟಪಡಿಸಿ: ಬಿಜೆಪಿಗೆ ಶಿವಸೇನೆ

ದೇಶಭಕ್ತಿ ಕುರಿತು ನಮಗೆ ಪಾಠ ಮಾಡುವ ಅಗತ್ಯವಿಲ್ಲ. ದೇಶಭಕ್ತಿ ಕುರಿತು ನಮಗೆ ಪಾಠ ಹೇಳುವ ದಿನಗಳಿನ್ನೂ ಬಂದಿಲ್ಲ, ಮೊದಲು ನಿಮ್ಮ ಹಿಂದುತ್ವ ವಾದದ ಕುರಿತು ಸ್ಪಷ್ಟಪಡಿಸಿ ಎಂದು ಬಿಜೆಪಿಗೆ ಶಿವಸೇನೆ ಹೇಳಿದೆ...
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ
ಮುಂಬೈ: ದೇಶಭಕ್ತಿ ಕುರಿತು ನಮಗೆ ಪಾಠ ಮಾಡುವ ಅಗತ್ಯವಿಲ್ಲ. ದೇಶಭಕ್ತಿ ಕುರಿತು ನಮಗೆ ಪಾಠ ಹೇಳುವ ದಿನಗಳಿನ್ನೂ ಬಂದಿಲ್ಲ, ಮೊದಲು ನಿಮ್ಮ ಹಿಂದುತ್ವ ವಾದದ ಕುರಿತು ಸ್ಪಷ್ಟಪಡಿಸಿ ಎಂದು ಬಿಜೆಪಿಗೆ ಶಿವಸೇನೆ ಹೇಳಿದೆ. 
ಮುಂಬೈನಲ್ಲಿ ನಿನ್ನೆ ನಡೆದ ವಾರ್ಷಿಕ ದಸರಾ ರ್ಯಾಲಿಯಲ್ಲಿ ಮಾತನಾಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ರಾಷ್ಟ್ರ ಪ್ರೇಮ ಕುರಿತು ನಮಗೆ ಪಾಠದ ಅಗತ್ಯವಿಲ್ಲ. ರಾಷ್ಟ್ರಪ್ರೇಮ ಕುರಿತು ನಮಗೆ ಪಾಠ ಮಾಡುವ ದಿನಗಳಿನ್ನೂ ಬಂದಿಲ್ಲ ಎಂದು ಹೇಳಿದ್ದಾರೆ. 
ನೋಟು ನಿಷೇಧದ ಬಳಿಕ ಎದುರಾಗಿರುವ ಬೆಲೆ ಏರಿಕೆ ಕುರಿತಂತೆ ಪಕ್ಷದ ಕಾರ್ಯಕರ್ತರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಟೀಕೆ ಮಾಡುತ್ತಿರುವ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವೈಕ್ತಿಗತ ವಾಗ್ದಾಳಿ ಬೇಡ. ಸಮಸ್ಯೆಗಳ ಕುರಿತು ಪಕ್ಷದ ವತಿಯಿಂದಲೇ ಪ್ರತಿಭಟನೆಗಳನ್ನು ನಡೆಸೋಣ. ಎಲ್ಲಾ ಅವ್ಯವಸ್ಥಗಳಿಗೂ ಒಬ್ಬ ವ್ಯಕ್ತಿಯನ್ನೂ ಗುರಿ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 
ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿದ ಬಳಿಕ ಸಾಕಷ್ಟು ಸಮಸ್ಯೆಗಳು ಎದುರಾಗಿತ್ತು. ಯಾರು ನೋಟು ನಿಷೇಧ ನಿರ್ಧಾರದ ಪರವಾಗಿದ್ದಾರೋ ಅವರೆಲ್ಲರೂ ದೇಶಪ್ರೇಮಿಗಳು ಹಾಗೂ ಯಾರೂ ನಿರ್ಧಾರದ ವಿರುದ್ಧವಿದ್ದಾರೆ ಅವರೆಲ್ಲರೂ ದೇಶದ್ರೋಹಿಗಳು ಎಂಬಂತೆ ಬಣ್ಣಿಸಲಾಗುತ್ತಿತ್ತು ಎಂದು ಕಿಡಿಕಾರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com