ಡಿಎನ್ಎ ಪರೀಕ್ಷೆ ಬಳಿಕ ಮತ್ತೋರ್ವ ಭಾರತೀಯನ ಮೃತದೇಹ ಭಾರತಕ್ಕೆ ಕರೆತರಲಾಗುತ್ತದೆ: ವಿ.ಕೆ.ಸಿಂಗ್

ಇರಾಕ್ ನಲ್ಲಿ ನಡೆಯುತ್ತಿರುವ ಡಿಎನ್ಎ ಪರೀಕ್ಷೆ ಪೂರ್ಣಗೊಂಡ ಬಳಿಕ ಮತ್ತೋರ್ವ ಭಾರತೀಯನ ಮೃತದೇಹವನ್ನು ಭಾರತಕ್ಕೆ ಕರೆ ತರಲಾಗುತ್ತದೆ ಎಂದು ವಿದೇಶಾಂಗ ಖಾತೆಗಳ ರಾಜ್ಯ ಸಚಿವ ಜನರಲ್ (ನಿವೃತ್ತ) ವಿ.ಕೆ. ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ...
ವಿ.ಕೆ.ಸಿಂಗ್
ವಿ.ಕೆ.ಸಿಂಗ್
Updated on
ನವದೆಹಲಿ: ಇರಾಕ್ ನಲ್ಲಿ ನಡೆಯುತ್ತಿರುವ ಡಿಎನ್ಎ ಪರೀಕ್ಷೆ ಪೂರ್ಣಗೊಂಡ ಬಳಿಕ ಮತ್ತೋರ್ವ ಭಾರತೀಯನ ಮೃತದೇಹವನ್ನು ಭಾರತಕ್ಕೆ ಕರೆ ತರಲಾಗುತ್ತದೆ ಎಂದು ವಿದೇಶಾಂಗ ಖಾತೆಗಳ ರಾಜ್ಯ ಸಚಿವ ಜನರಲ್ (ನಿವೃತ್ತ) ವಿ.ಕೆ. ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ. 
ಇರಾಕ್ ನಲ್ಲಿ ಇಸಿಸ್ ಉಗ್ರರಿಂದ ಹತ್ಯೆಗೀಡಾಗಿದ್ದ 39 ಭಾರತೀಯರ ಮೃತದೇಹಗಳ ಪೈಕಿ ನಿನ್ನೆಯಷ್ಟೇ 38 ಮೃತದೇಹಗಳನ್ನು ಭಾರತಕ್ಕೆ ಕರೆ ತರಲಾಗಿತ್ತು. ಉಳಿದ ಓರ್ವ ಭಾರತೀಯನ ಗುರುತುಗಳು ಇನ್ನು ಪತ್ತೆಯಾಗದ ಹಿನ್ನಲೆಯಲ್ಲಿ ಇರಾಕ್ ನಲ್ಲಿ ಡಿಎನ್ಎ ಪರೀಕ್ಷೆ ಮುಂದವರೆದಿದೆ. 
ಬಿಹಾರ ರಾಜ್ಯದಿಂದ ದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು. ರಾಜು ಯಾದವ್ ಎಂಬುವವರ ಮೃತದೇಹವನ್ನು ಭಾರತಕ್ಕೆ ಕರೆ ತರಬೇಕಿದೆ. ಡಿಎನ್ಎ ಪರೀಕ್ಷೆಯಲ್ಲಿ ಶೇ.70ರಷ್ಟು ಮಾತ್ರ ಹೊಂದಾಣಿಕೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ಮತ್ತೆ ಮಾದರಿಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಗಳು ಸಂಪೂರ್ಣಗೊಂಡ ಬಳಿಕ ಮೃತದೇಹವನ್ನು ಭಾರತಕ್ಕೆ ಕರೆ ತರಲಾಗುತ್ತದೆ ಎಂದು ಹೇಳಿದ್ದಾರೆ. 
ಇರಾಕ್'ನ ಎರಡನೇ ಅತ್ಯಂತ ದೊಡ್ಡ ನಗರವಾದ ಮೊಸುಲ್ ಅನ್ನು ಇಸಿಸ್ ಉಗ್ರರು 2014ರಲ್ಲಿ ವಶಕ್ಕೆ ಪಡೆದಿದ್ದರು. ಭಾರತದ 40 ಕಾರ್ಮಿಕರ ತಂಡವನ್ನು ಈ ಉಗ್ರರು ಆಗ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಇವರಲ್ಲಿ ಹೆಚ್ಚಿನವರು ಪಂಜಾಬ್ ರಾಜ್ಯ ಮೂಲದವರಾಗಿದ್ದಾರೆ. 
ಅವರ ಪೈಕಿ ಗುರ್ದಾಸ್ಪುರದ ಹರ್'ಜೀತ್ ಮಸೀಹ್ ಉಗ್ರರಿಂದ ತಪ್ಪಿಸಿಕೊಂಡು ಭಾರತಕ್ಕೆ ಮರಳಿದ್ದರು. ಉಳಿದ ಎಲ್ಲರನ್ನೂ ಉಗ್ರರು ಹತ್ಯೆ ಮಾಡುವುದನ್ನು ನಾನು ನೋಡಿದ್ದೇನೆಂದು ಹೇಳಿಕೆ ನೀಡಿದ್ದರು. ಆದರೆ, ಭಾರತ ಸರ್ಕಾರ ಇದನ್ನು ಅಲ್ಲಗೆಳೆದಿತ್ತು. ಮಸೀಹ್ ಹೇಳುತ್ತಿರುವುದು ಕಟ್ಟು ಕತೆ. ತಾನು ಬಾಂಗ್ಲಾದೇಶ ಮುಸ್ಲಿಂ ಎಂದು ಸುಳ್ಳು ಹೇಳಿ ಮಸೀಹ್ ತಪ್ಪಿಸಿಕೊಂಡಿದ್ದರು ಎಂದು ಸುಷ್ಮಾ ಪ್ರತಿಕ್ರಿಯೆ ನೀಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com