ಘಟನೆಯಲ್ಲಿ ಆರು ಸಿಬ್ಬಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಕೇದಾರನಾಥ ದೇವಾಲಯದ ಬಳಿ ಮಂಗಳವಾರ ಬೆಳಗ್ಗೆ ಭಾರತೀಯ ವಾಯುಪಡೆಯ ಕಾರ್ಗೋ ವಿಮಾನವಾಗಿದೆ ಎಂದು ಸೇನಾ ಮೂಲಗಳ ಸ್ಪಷ್ಟಪಡಿಸಿವೆ. ಎಂಐ 17 ಹೆಲಿಕ್ಯಾಪ್ಟರ್ ಸೈನಿಕರಿಗೆ ಸಲಕರಣೆಗಳನ್ನು ಸಾಗಿಸುತ್ತಿತ್ತು, ಲ್ಯಾಂಡಿಂಗ್ ವೇಳೆ ಕಬ್ಬಿಣದ ಗೇಟ್ ಗೆ ಗುದ್ದಿ ಕಾಪ್ಟರ್ ಮಗುಚಿ ಬಿದ್ದಿದೆ ಎಂದು ತಿಳಿದು ಬಂದಿದೆ.