ಜಮ್ಮು-ಕಾಶ್ಮೀರ: ನಾಗರೀಕನ ಮನೆಗೆ ನುಗ್ಗಿದ ಉಗ್ರರು, ಓರ್ವ ವ್ಯಕ್ತಿ ಅಪಹರಣ
ಜಮ್ಮು ಮತ್ತು ಕಾಶ್ಮೀರದ ಬಂಡಿಪೋರ ಜಿಲ್ಲೆಯ ಹಜಿನ್ ಎಂಬ ಪ್ರದೇಶದಲ್ಲಿದ್ದ ನಾಗರೀಕನ ಮನೆಯೊಂದಕ್ಕೆ ನುಗ್ಗಿರುವ ಉಗ್ರರು ಓರ್ವ ವ್ಯಕ್ತಿಯನ್ನು ಅಪಹರಣ ಮಾಡಿದ್ದಾರೆಂದು ಮಂಗಳವಾರ ತಿಳಿದುಬಂದಿದೆ...
ಜಮ್ಮು-ಕಾಶ್ಮೀರ: ನಾಗರೀಕನ ಮನೆಗೆ ನುಗ್ಗಿದ ಉಗ್ರರು, ಓರ್ವ ವ್ಯಕ್ತಿ ಅಪಹರಣ
ಬಂಡಿಪೋರಾ; ಜಮ್ಮು ಮತ್ತು ಕಾಶ್ಮೀರದ ಬಂಡಿಪೋರ ಜಿಲ್ಲೆಯ ಹಜಿನ್ ಎಂಬ ಪ್ರದೇಶದಲ್ಲಿದ್ದ ನಾಗರೀಕನ ಮನೆಯೊಂದಕ್ಕೆ ನುಗ್ಗಿರುವ ಉಗ್ರರು ಓರ್ವ ವ್ಯಕ್ತಿಯನ್ನು ಅಪಹರಣ ಮಾಡಿದ್ದಾರೆಂದು ಮಂಗಳವಾರ ತಿಳಿದುಬಂದಿದೆ.
ನಾಲ್ವರು ಉಗ್ರರಿದ್ದ ಗುಂಪೊಂದು ಇದ್ದಕ್ಕಿದ್ದಂತೆ ಮನೆಗೆ ನುಗ್ಗಿದೆ. ಈ ವೇಳೆ ಸ್ಥಳದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ, ವ್ಯಕ್ತಿಯೊಬ್ಬನನ್ನು ಹೊತ್ತೊಯ್ದಿದ್ದಾರೆಂದು ತಿಳಿದುಬಂದಿದೆ.
ಉಗ್ರರ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಫರೂಕ್ ಪರ್ರೆ ಎಂಬುವವರ ಪತ್ನಿ, ಪುತ್ರಿ ಹಾಗೂ ಸಹೋದರರು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ.
ಗಾಯಾಳುಗಳನ್ನು ರಫೀಕಾ, ಮತ್ತು ಹಿಲಾಲ್ ಅಹ್ಮದ್ ಪರ್ರೆ ಎಂದು ಗುರ್ತಿಸಲಾಗಿದೆ. ಇದಲ್ಲದೆ ಕೆಲವರ ಮೇಲೆ ಚೂರಿಯಿಂದಲೂ ಉಗ್ರರು ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. ಗಾಯಾಗಳುಗಳನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಗ್ರರು ಮುಂತಾಜಿರ್ ಅಹ್ಮದ್ ಪರ್ರೆ ಎಂಬುವವರನ್ನು ಅಪಹರಣ ಮಾಡಿದ್ದಾರೆ. ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.