ವಾರಣಾಸಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಿಬ್ಬಂದಿಗಳ ಧಿಡೀರ್ ಮುಷ್ಕರ, ಅಧಿಕಾರಿಗಳಿಗೆ ಸಂಕಷ್ಟ

ಇಂಡಿಗೋ ಏರ್ ಲೈನ್ಸ್ ಸಿಬ್ಬಂದಿಗಳು ಇದ್ದಕ್ಕಿದ್ದಂತೆ ಮುಷ್ಕರಕ್ಕೆ ಕರೆ ನಿಡಿದ ಕಾರಣ ಪ್ರಯಾಣಿಕರಿಂದ ನಾವು ತೊಂದರೆಗೀಡಾಗಿದ್ದೇವೆ..........
ವಾರಣಾಸಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಿಬ್ಬಂದಿಗಳ ಧಿಡೀರ್ ಮುಷ್ಕರ, ನಿಲ್ದಾಣದ ಅಧಿಕಾರಿಗಳಿಗೆ ಸಂಕಷ್ಟ
ವಾರಣಾಸಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಿಬ್ಬಂದಿಗಳ ಧಿಡೀರ್ ಮುಷ್ಕರ, ನಿಲ್ದಾಣದ ಅಧಿಕಾರಿಗಳಿಗೆ ಸಂಕಷ್ಟ
ವಾರಣಾಸಿ: ಇಂಡಿಗೋ ಏರ್ ಲೈನ್ಸ್ ಸಿಬ್ಬಂದಿಗಳು ಇದ್ದಕ್ಕಿದ್ದಂತೆ ಮುಷ್ಕರಕ್ಕೆ ಕರೆ ನಿಡಿದ ಕಾರಣ ಪ್ರಯಾಣಿಕರಿಂದ ನಾವು ತೊಂದರೆಗೀಡಾಗಿದ್ದೇವೆ  ಎಂದು ಉತ್ತರ ಪ್ರದೇಶದ ವಾರಣಾಸಿ ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದರು.
ವೇತನದ ಸಮಸ್ಯೆಗಳ ಕಾರಣ ಸಿಬ್ಬಂದಿ ಈ ಮುಷ್ಕರ ನಡೆಸುತ್ತಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ.
"ವೇತನ ಪಾವತಿ ವಿಚಾರದಲ್ಲಿ ಸಮಸ್ಯೆಯಾದ ಕಾರಣ ಇಂಡಿಗೋ ವಿಮಾನ ಸಂಸ್ಥೆ ಸಿಬ್ಬಂದಿಗಳು ಧಿಡೀರ್ ಮುಶ್ಕರ ಕೈಗೊಂಡಿದ್ದಾರೆ. ಇದರಿಂದಾಗಿ ಆ ವಿಮಾನದಲ್ಲಿ ಪ್ರಯಾಣಿಸಬೇಕಾಗಿದ್ದ ಪ್ರಯಾಣಿಕರಿಂದ ನಾವು ತೊಂದರೆ ಅನುಭವಿಸುವಂತಾಗಿದೆ" ಅವರು ಹೇಳಿದ್ದಾರೆ.
ಇಂಡಿಗೋ ಸಿಬ್ಬಂದಿಗಳು ಈ ಮುಷ್ಕರದ ಬಗೆಗೆ ಭಾರತ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಯಾವ ಸೂಚನೆ ನೀಡಿರಲಿಲ್ಲ ಎಂದು ಅವರು ತಿಳಿಸಿದರು.
ಕೆಲವು ದಿನಗಳಿಂದ ಇಂಡಿಗೋ ವಿಮಾನ ಪ್ರಯಣದಲ್ಲಿ ತೊಂದರೆಗಳು ಸಂಭವಿಸುತ್ತಿದೆ. ಮಾರ್ಚ್ 29 ರಂದು 77 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿಗಳಿದ್ದ ತಿರುಪತಿ ಮತ್ತು ಹೈದರಾಬಾದ್ ನಡುವೆ ಪ್ರಯಾಣಿಸುವ ಇಂಡಿಗೊ ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿವ ವೇಳೆ ಟೈರ್ ಸ್ಪೋಟಗೊಂಡಿತ್ತು.  ಅದೃಷ್ಟವಶಾತ್  ಈ ಘಟನೆಯಲ್ಲಿ ಯಾವ ಪ್ರಾಣಹಾನಿ ಸಂಭವಿಸಿರಲಿಲ್ಲ.
ಇದಕ್ಕೂ ಮುನ್ನ ಮಾ.28 ರಂದು ಬೆಂಗಳೂರಿನಿಂದ ವಿಜಯವಾಡಾಗೆ ತೆರಳುತ್ತಿದ್ದ  6E-7204 ಇಂಡಿಗೋ ವಿಮಾನವು ವಿಜಯವಾಡಾ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವಾಗ ರನ್ ವೇನಿಂದ ಜಾರಿ ದೂರ ಸರಿದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com