ಸಂಸತ್ತಿನಲ್ಲಿ ಮತ್ತೆ ಮುಂದುವರೆದ ಕಾವೇರಿ ಗದ್ದಲ: ಲೋಕಸಭೆ ಕಲಾಪ ನಾಳೆಗೆ ಮುಂದೂಡಿಕೆ

ಕಾವೇರಿ ನಿರ್ಹವಣಾ ಮಂಡಳಿ ರಚನೆ ಕುರಿತು ತಮಿಳುನಾಡು ಸಂಸದರು ಸಂಸತ್ತಿನಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದ ಹಿನ್ನಲೆಯಲ್ಲಿ ಲೋಕಸಭಾ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ...
ಸಂಸತ್ತಿನಲ್ಲಿ ಮತ್ತೆ ಮುಂದುವರೆದ ಕಾವೇರಿ ಗದ್ದಲ: ಲೋಕಸಭೆ ಕಲಾಪ ನಾಳೆಗೆ ಮುಂದೂಡಿಕೆ
ಸಂಸತ್ತಿನಲ್ಲಿ ಮತ್ತೆ ಮುಂದುವರೆದ ಕಾವೇರಿ ಗದ್ದಲ: ಲೋಕಸಭೆ ಕಲಾಪ ನಾಳೆಗೆ ಮುಂದೂಡಿಕೆ
Updated on: 
ನವದೆಹಲಿ; ಕಾವೇರಿ ನಿರ್ಹವಣಾ ಮಂಡಳಿ ರಚನೆ ಕುರಿತು ತಮಿಳುನಾಡು ಸಂಸದರು ಸಂಸತ್ತಿನಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದ ಹಿನ್ನಲೆಯಲ್ಲಿ ಲೋಕಸಭಾ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ. 
ಕಲಾಪ ಆರಂಭವಾಗುತ್ತಿದ್ದಂತೆಯೇ ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಡಿದ ತಮಿಳುನಾಡು ಸಂಸದರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದ್ದರು. 
ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ಕುರಿತ ವಿಚಾರವನ್ನು ಚರ್ಚೆಗೆ ಕೈಗೆತ್ತಿಕೊಳ್ಳಬೇಕೆಂದು ತಿಳಿಸಿದರು. ಅವಿಶ್ವಾಸ ನಿರ್ಣಯ ಮಂಡನೆ ವೇಳೆ ನಿಯಮಗಳ ಪ್ರಕಾರ 50 ಸಂಸದರ ಅಭಿಪ್ರಾಯಗಳನ್ನು ಪಡೆಯಬೇಕು. ಈ ಹಿನ್ನಲೆಯಲ್ಲಿ ಸಂಸದರನ್ನು ತಮ್ಮ ತಮ್ಮಆಸನಗಳಲ್ಲಿ ಕುಳಿತುಕೊಳ್ಳುವಂತೆ ಮಹಾಜನ್ ಅವರು ಸಂಸದರಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ, ಸಂಸದರು ತಮ್ಮ ಪ್ರತಿಭಟನೆಗಳನ್ನು ಮುಂದುವರೆಸಿದ್ದರು. ಈ ವೇಳೆ ಮಾತನಾಡಿದ ಸುಮಿತ್ರಾ ಮಹಾಜನ್ ಅವರು, ಪ್ರಸ್ತುತದ ಪರಿಸ್ಥತಿಯಲ್ಲಿ 50 ಸಂಸದರ ಪ್ರತಿಕ್ರಿಯೆಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಳಿಕ ಕಲಾಪವನ್ನು ನಾಳೆಗೆ ಮುಂದೂಡಿದ್ದಾರೆ. 
ಸಂಸತ್ ಕಲಾಪ ವಿವಿಧ ಕಾರಣಗಳಿಂದಾಗಿ ಗೊಂದಲದ ಗೂಡಾಗಿದೆ. ಅತ್ತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ತೆಲುಗು ದೇಶಂ ಪಕ್ಷದ ಸಂಸದರು ಕಲಾಪಕ್ಕೆ ಅಡ್ಡಿ ಪಡಿಸುತ್ತಿದ್ದರೆ. ಇತ್ತ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಕೇಂದ್ರದ ಮೋದಿ ಸರ್ಕಾರದ ವಿರುದ್ದ ವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್ ನೀಡಿದೆ. ಈ ವಿಚಾರಗಳು ಕೂಡ ಸುಗಮ ಕಲಾಪವನ್ನು ನುಂಗಿ ಹಾಕುತ್ತಿದೆ. 
ಏತನ್ಮಧ್ಯೆ ಇತ್ತ ತಮಿಳುನಾಡು ಸಂಸದರು ಕಾವೇರಿ ನಿರ್ವಹಣಾ ಮಂಡಳಿಯನ್ನು ಕೂಡಲೇ ರಚನೆ ಮಾಡಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಮತ್ತೆ ಕಲಾಪಕ್ಕೆ ಅಡ್ಡಿಯುಂಟಾಗಿದೆ. 
ಈ ವಿಚಾರಗಳ ಮಧ್ಯೆಯೇ ಈಶಾನ್ಯ ಭಾರತ ಚುನಾವಣೆ ಬಳಿಕ ನಡೆದ ಪ್ರತಿಮೆಗಳ ಧ್ವಂಸ ಪ್ರಕರಣ ಮತ್ತು ಎಸ್ ಸಿ ಎಸ್ ಟಿ ಕಾಯ್ದೆ ವಿವಾದವೂ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com