ರಕ್ಷಣಾ ಇಲಾಖೆ ವೆಬ್ ಸೈಟ್ ಹ್ಯಾಕ್ ಹಿನ್ನೆಲೆ, ಗೃಹ ಸಚಿವಾಲಯ ವೆಬ್ ಸೈಟ್ ಬಂದ್!

ರಕ್ಷಣಾ ಸಚಿವಾಲಯದ ವೆಬ್ ಸೈಟ್ ಹ್ಯಾಕ್ ಆದ ಬೆನ್ನಲ್ಲೇ ಗೃಹ ಸಚಿವಾಲಯದ ವೆಬ್ ಸೈಟ್ ನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಗಂಭೀರ ಮುನ್ನೆಚ್ಚರಿಕೆಗಳ ಭಾಗವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ರಕ್ಷಣಾ ಸಚಿವಾಲಯದ ವೆಬ್ ಸೈಟ್ ಹ್ಯಾಕ್ ಆದ ಬೆನ್ನಲ್ಲೇ  ಗೃಹ ಸಚಿವಾಲಯದ ವೆಬ್ ಸೈಟ್ ನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಗಂಭೀರ ಮುನ್ನೆಚ್ಚರಿಕೆಗಳ ಭಾಗವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಗೃಹ ಇಲಾಖೆ ವೆಬ್ ಸೈಟ್ ನ್ನು ನಿರ್ವಹಿಸುವ ನ್ಯಾಷನಲ್ ಇನ್ಫಾಮ್ಯಾಟ್ರಿಕ್ಸ್ ಸೆಂಟರ್ ಇಲಾಖಾ ಜಾಲತಾಣವನ್ನು ತಾತ್ಕಾಲಿಕವಾಗಿ ಮುಚ್ಚಿದ್ದು ಭದ್ರತಾ ವ್ಯವಸ್ಥೆಯನ್ನು ನವೀಕರಿಸುತ್ತಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ
ಇಲಾಖೆ ವೆಬ್ ಸೈಟ್ ಗೆ ಪ್ರವೇಶಿಸಲು ಪ್ರಯತ್ನಿಸಿದಾಗ " ನೀವು ವಿನಂತಿಸಿದ ಸೇವೆಯು ತಾತ್ಕಾಲಿಕವಾಗಿ ಲಭ್ಯವಿಲ್ಲ. ಅಡಚಣೆಗಾಗಿ ಕ್ಷಮಿಸಿ, ಶೀಘ್ರದಲ್ಲಿಯೇ ಸೇವೆಯು ಪುನಾರಂಭವಾಗಲಿದೆ" ಎನ್ನುವ ಸಂದೇಶ ಕಾಣಿಸುತ್ತದೆ. ಹೆಚ್ಚುವರಿ ಮುನ್ನೆಚ್ಚರಿಕೆಗಳ ಭಾಗವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ
ರಕ್ಷಣಾ ಸಚಿವಾಲಯದ ವೆಬ್ ಸೈಟ್ ಹ್ಯಾಕ್ ಆದ ಸುದ್ದಿ ತಿಳಿದ ಬಳಿಕ ಗೃಹ ಇಲಾಖೆ ವೆಬ್ ತಾಣವನ್ನು ಬಂದ್ ಮಾಡಲಾಗಿದೆ.
ರಕ್ಷಣಾ ಇಲಾಖೆಯ ವೆಬ್ ತಾಣವನ್ನು ಚೀನಾ ಹ್ಯಾಕರ್ ಗಳು ಹ್ಯಾಕ್ ಮಾಡಿದ್ದಾರೆಂದು ಹೇಳಲಾಗಿದ್ದು ವೆಬ್ ಸೈಟ್ ನಲ್ಲಿ ಚೀನೀ ಭಾಷೆಯ ಅಕ್ಷರಗಳು ಕಂಡುಬಂದಿದೆ. ಇದೀಗ ವೆಬ್ ಸೈಟ್ ಪುನರ್ ಸ್ಥಾಪನೆಗೆ ಪ್ರಯತ್ನಗಳು ನಡೆದಿದ್ದು ಶೀಘ್ರದಲ್ಲಿಯೇ ವೆಬ್ ಸೈಟ್ ಪುನಾರಂಭವಾಗಲಿದೆ ಎಂದು  ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com