ಗದ್ದಲದಲ್ಲೇ ಸಂಸತ್ ಅಧಿವೇಶನ ಅಂತ್ಯ: ಉಭಯ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ

ವಿಪಕ್ಷಗಳ ಗದ್ದಲದಿಂದಾಗಿಯೇ ಸುದ್ದಿಗೆ ಗ್ರಾಸವಾಗಿದ್ದ ಸಂಸತ್ ಅಧಿವೇಶನ ಯಾವುದೇ ರೀತಿಯ ಫಲಪ್ರದ ಚರ್ಚೆ ಇಲ್ಲದೇ ಅಂತ್ಯವಾಗಿದ್ದು, ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿಪಕ್ಷಗಳ ಗದ್ದಲದಿಂದಾಗಿಯೇ ಸುದ್ದಿಗೆ ಗ್ರಾಸವಾಗಿದ್ದ ಸಂಸತ್ ಅಧಿವೇಶನ ಯಾವುದೇ ರೀತಿಯ ಫಲಪ್ರದ ಚರ್ಚೆ ಇಲ್ಲದೇ ಅಂತ್ಯವಾಗಿದ್ದು, ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ.
ಕಳೆದ ಮಾರ್ಚ್ 5ರಂದು ಆರಂಭವಾಗಿದ್ದ ಸಂಸತ್ ಕಲಾಪ ಒಂದೇ ಒಂದು ಮಸೂದೆಯನ್ನೂ ಅಂಗೀಕಾರ ಮಾಡಲಾಗದೇ ಕೇವಲ ಗದ್ದಲಗಳ ಗೊಂದಲದಲ್ಲೇ ಅಂತ್ಯಗೊಂಡಿದೆ. ಈಶಾನ್ಯ ಭಾರತ ರಾಜ್ಯದ ವಿಧಾನಸಭಾ ಚುನಾವಣೆ ಬಳಿಕ ನಡೆದ ಪ್ರತಿಮೆ ಧ್ವಂಸ ವಿಚಾರದಿಂದ ಆರಂಭವಾದ ವಿಪಕ್ಷಗಳ ಗಲಾಟೆ, ಗದ್ದಲ, ಪ್ರತಿಭಟನಾ ಪ್ರಹಸನ, ಕಾವೇರಿ ನಿರ್ವಹಣಾ ಮಂಡಳಿ ರಚನೆ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದವರೆಗೂ ಮುಂದುವರೆದಿತ್ತು. 
ಅತ್ತ ತಮಿಳುನಾಡಿನ ಎಐಎಡಿಎಂಕೆ ಮತ್ತು ಡಿಎಂಕೆ ಸದಸ್ಯರು ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರೆ, ಇತ್ತ ಆಂಧ್ರ ಪ್ರದೇಶದ ಸಂಸದರು ವಿಶೇಷ ಸ್ಥಾನಮಾನಕ್ಕೆ ಆಗ್ರಸಿಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಮತ್ತೊಂದೆಡೆ ಎಸ್ ಎಸ್ ಎಸ್ ಟಿ ಗದ್ದಲ ಕೂಡ ಸಂಸತ್ ಕಲಾಪಕ್ಕೆ ಅಡ್ಡಿಯಾಗಿತ್ತು. ಏತನ್ಮಧ್ಯೆ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧಅವಿಶ್ವಾಸ ನಿರ್ಣಯ ಮಂಡಿಸಲವು ಮುಂದಾಗಿದ್ದಾಗ ಇದೊಂದೇ ವಿಚಾರ ಬರೊಬ್ಬರಿ ಒಂದು ವಾರದ ಕಲಾಪವನ್ನು ನುಂಗಿ ಹಾಕಿತ್ತು.
ಒಟ್ಟಾರೆ ವಿಪಕ್ಷಗಳ ಗದ್ದಲ ಮತ್ತೊಮ್ಮೆ ಸಂಸತ್ ಕಲಾಪವನ್ನು ನುಂಗಿ ಹಾಕಿದ್ದು, ಸಂಸತ್ ಅಮೂಲ್ಯ ಸಮಯ ಮತ್ತು ಜನರ ಹಣವನ್ನು ವ್ಯರ್ಥ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com