ಹಾರ್ದಿಕ್ ಪಟೇಲ್ ಮೇಲೆ ಮಸಿ ದಾಳಿ: ವ್ಯಕ್ತಿ ಬಂಧನ

ಗುಜರಾತ್ ಪಟೇಲ್ ಮೀಸಲು ಹೋರಾಟಗಾರ ಹಾರ್ದಿಕ್ ಪಟೇಲ್ ಅವರ ಮೇಲೆ ಹೋಟೆಲ್ ವೊಂದರಲ್ಲಿ ಮಸಿ ಎರಚಿದ್ದ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಭಾನುವಾರ ತಿಳಿದುಬಂದಿದೆ...
ಹಾರ್ದಿಕ್ ಪಟೇಲ್ ಮೇಲೆ ಮಸಿ ದಾಳಿ
ಹಾರ್ದಿಕ್ ಪಟೇಲ್ ಮೇಲೆ ಮಸಿ ದಾಳಿ
Updated on
ಉಜ್ಜೈನ್ (ಮಧ್ಯಪ್ರದೇಶ): ಗುಜರಾತ್ ಪಟೇಲ್ ಮೀಸಲು ಹೋರಾಟಗಾರ ಹಾರ್ದಿಕ್ ಪಟೇಲ್ ಅವರ ಮೇಲೆ ಹೋಟೆಲ್ ವೊಂದರಲ್ಲಿ ಮಸಿ ಎರಚಿದ್ದ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಭಾನುವಾರ ತಿಳಿದುಬಂದಿದೆ. 
ಮಿಲಿಂದ್ ಗುರ್ಜಾರ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 
ಹೋಟೆಲ್ ವೊಂದರಲ್ಲಿ ನಿನ್ನೆ ಹಾರ್ದಿಕ್ ಪಟೇಲ್ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಈ ವೇಳೆ ಸ್ಥಳಕ್ಕೆ ಬಂದಿರುವ ಮಿಲಿಂದ್ ಗುರ್ಜರ್ ಎಂಬ ವ್ಯಕ್ತಿ ಹಾರ್ದಿಕ್ ಮೇಲೆ ಮಸಿ ದಾಳಿ ನಡೆಸಿತ್ತ. ಬಳಿಕ ಹಾರ್ದಿಕ್ ಬೆಂಬಲಿಗರು ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದರು. 
ಮಸಿ ದಾಳಿ ನಡೆಸಿದ ಬಳಿಕ ಪ್ರತಿಕ್ರಿಯೆ ನೀಡಿದ ಮಿಲಿಂದ್, ತನ್ನ ಸ್ವಂತ ಹಿಸಾಸಕ್ತಿಗಳಿಗಾಗಿ ಹಾರ್ದಿಕ್ ಗುರ್ಜಾರ್ ಮತ್ತು ಪಟೇದಾರ್ ಸಮುದಾಯಗಳಿಗೆ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಸಿಟ್ಟುಗೊಂಡು ಮಸಿ ಎರಚಿದೆ ಎಂದು ಹೇಳಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com