ಅಹ್ಮದಾನಗರ: ಶಿವಸೇನೆಯ ಇಬ್ಬರ ಮುಖಂಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್'ಸಿಪಿ ಶಾಸಕ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಅಹ್ಮದಾನಗರದಲ್ಲಿ ಶಿವಸೇನೆಯ ಮುಖಂಡರಾದ ಸಂಜಯ್ ಕೊಟ್ಕರ್ ಮತ್ತು ವಸಂತ್ ಆನಂದ್ ಎಂಬುವವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.
ದ್ವಿಚಕ್ರ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ಸ್ಥಳದಿಂದ ಕಾಲ್ಕಿದ್ದರು.
ಪ್ರಕರಣ ಸಂಬಂಧ ಪೊಲೀಸರು ಇದೀಗ ಎನ್'ಸಿಪಿ ನಾಯಕ ಸಂಗ್ರಾಮ್ ಜಗತಾಪ್ ಸೇರಿ ಮೂವರನ್ನು ಬಂಧಿಸಿದ್ದು, ಪ್ರಕರಣ ಸಂಬಂಧ ಈ ವರೆಗೂ 31 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.