ಹರ್ಯಾಣ: 20 ವಿದ್ಯಾರ್ಥಿಗಳ ಜೀವ ರಕ್ಷಿಸಿ ತಾನು ಮೃತಪಟ್ಟ ಬಾಲಕ
ಮದರಸದ ಕಟ್ಟಡ ಕುಸಿಯುವುದಕ್ಕೆ ಮುನ್ನ ಅಶ್ಫಾಕ್ ಎಂಬಾತ ಜೋರಾಗಿ ಕಿರುಚಿಕೊಂಡಿದ್ದು ಪರಿಣಾಮ 20 ಮಂದಿ ವಿದ್ಯಾರ್ಥಿಗಳನ್ನು ರಕ್ಷಿಸಿ ತಾನು ಕಟ್ಟಡದ ಕೆಳಗೆ ಸಿಲುಕಿ ಮೃತಪಟ್ಟಿದ್ದಾನೆ....
ಮೇವಾತ್: ಮದರಸದ ಕಟ್ಟಡ ಕುಸಿಯುವುದಕ್ಕೆ ಮುನ್ನ ಅಶ್ಫಾಕ್ ಎಂಬಾತ ಜೋರಾಗಿ ಕಿರುಚಿಕೊಂಡಿದ್ದು ಪರಿಣಾಮ 20 ಮಂದಿ ವಿದ್ಯಾರ್ಥಿಗಳನ್ನು ರಕ್ಷಿಸಿ ತಾನು ಕಟ್ಟಡದ ಕೆಳಗೆ ಸಿಲುಕಿ ಮೃತಪಟ್ಟಿದ್ದಾನೆ.
ಕಳೆದ ಶುಕ್ರವಾರ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಚಂಡಮಾರುತ ಬೀಸಿದ್ದ ಈ ವೇಳೆ ಮದರಸದ ಕಟ್ಟಡದ ಚಾವಣೆಯೊಂದು ಕುಸಿದಿದೆ. ಈ ವೇಳೆ 17 ವರ್ಷದ ಅಶ್ಫಾಕ್ ಜೋರಾಗಿ ಕಿರುಚಿಕೊಂಡಿದ್ದರ ಪರಿಮಾಮ ಕೆಲ ವಿದ್ಯಾರ್ಥಿಗಳ ಹೊರಗಡೆ ಓಡಿ ಬಂದಿದ್ದರಿಂದ ಹಲವರು ಬದುಕುಳಿದಿದ್ದಾರೆ.
ಮೊಹಮ್ಮದ್ ಎಂಬುವರ ಆರು ಮಕ್ಕಳ ಪೈಕಿ ಅಶ್ಫಾಕ್ ಒಬ್ಬನಾಗಿದ್ದಾನೆ. ಇನ್ನು ಪುತ್ರನ ಸಾವಿನ ಕುರಿತಂತೆ ಪೋಷಕರ ಹೆಮ್ಮೆ ವ್ಯಕ್ತಪಡಿಸುತ್ತಾರೆ. ತಾನು ಸತ್ತರು ಹಲವು ಪ್ರಾಣಗಳನ್ನು ಕಾಪಾಡುವಲ್ಲಿ ನನ್ನ ಮಗ ಗೆದ್ದಿದ್ದಾನೆ ಎಂದು ಅಶ್ಫಾಕ್ ತಂದೆ ಮೊಹಮ್ಮದ್ ಹೇಳಿದ್ದಾರೆ.
ಹರಿಯಾಣದ ವಕ್ತಾ ಬೋರ್ಡ್ ಮುಖ್ಯಸ್ಥ ರಯೀಸ್ ಖಾನ್ ಮದರಸದ ನಿರ್ಮಾಣಕ್ಕಾಗಿ ಹತ್ತು ಲಕ್ಷ ರುಪಾಯಿ ಹಾಗೂ ಮೃತ ಅಶ್ಫಾಕ್ ಕುಟುಂಬಕ್ಕೆ 2 ಲಕ್ಷ ರುಪಾಯಿ ಬಿಡುಗಡೆ ಮಾಡಿದ್ದಾರೆ.