ಪ್ಯಾನ್ ಕಾರ್ಡ್ ಅರ್ಜಿಯಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಸ್ಥಾನಮಾನದ ಮಾನ್ಯತೆ

ತೃತೀಯ ಲಿಂಗಿಗಳ ತೆರಿಗೆ ಸಂಬಂಧಿತ ವ್ಯವಹಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಕಾನೂನಿಗೆ ಕೇಂದ್ರಸರ್ಕಾರ ತಿದ್ದುಪಡಿ ತಂದಿದ್ದು, ಪ್ಯಾನ್ ಕಾರ್ಡ್ ಅರ್ಜಿಯಲ್ಲಿ ಸ್ವತಂತ್ರ ಸ್ಥಾನಮಾನದ ಮಾನ್ಯತೆ ನೀಡಲಾಗಿದೆ.
ತೃತೀಯ ಲಿಂಗಿಗಳು
ತೃತೀಯ ಲಿಂಗಿಗಳು

ನವದೆಹಲಿ :  ತೃತೀಯ ಲಿಂಗಿಗಳ ತೆರಿಗೆ ಸಂಬಂಧಿತ ವ್ಯವಹಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಕಾನೂನಿಗೆ ಕೇಂದ್ರಸರ್ಕಾರ ತಿದ್ದುಪಡಿ ತಂದಿದ್ದು,  ಪ್ಯಾನ್  ಕಾರ್ಡ್ ಅರ್ಜಿಯಲ್ಲಿ ಸ್ವತಂತ್ರ ಸ್ಥಾನಮಾನದ ಮಾನ್ಯತೆ ನೀಡಲಾಗಿದೆ.

ಪ್ರಸ್ತುತ ಪ್ಯಾನ್ ಕಾರ್ಡ್  ಅರ್ಜಿಯಲ್ಲಿ  ಪುರುಷರು ಮತ್ತು ಮಹಿಳೆಯರನ್ನು ಮಾತ್ರ ಗುರುತಿಸಲಾಗುತಿತ್ತು. ಆದರೆ, ಈಗ  ತೃತೀಯ ಲಿಂಗಿಗಳಿಗಾಗಿಯೇ  ಪ್ಯಾನ್ ಕಾರ್ಡ್ ಅರ್ಜಿಯಲ್ಲಿ ಹೊಸ   ಬಾಕ್ಸ್ ವೊಂದನ್ನು  ಒದಗಿಸಲಾಗುತ್ತಿದೆ,

ಕೇಂದ್ರೀಯ ನೇರ ತೆರಿಗೆ ಮಂಡಳಿ ನಿನ್ನೆ  ಹೊರಡಿಸಿರುವ ಅಧಿಸೂಚನೆಯಲ್ಲಿ ಈ ವಿಷಯ ತಿಳಿಸಿದ್ದು,
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎ ಮತ್ತು 295 ರ ಅಡಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, ಪ್ಯಾನ್ ನಂಬರ್ ಒದಗಿಸಲು  ಹೊಸ ಅರ್ಜಿಯ ತಯಾರಿ  ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಆಧಾರ್ ಕಾರ್ಡ್  ಅರ್ಜಿಯಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಸ್ಥಾನಮಾನ ನೀಡಲಾಗಿತ್ತು. ಆದರೆ. ಪ್ಯಾನ್ ಕಾರ್ಡ್ ನಲ್ಲಿ ನೀಡಿರಲಿಲ್ಲ. ಅವರ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ತೆರಿಗೆ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಆಧಾರ್ ನೋಂದಣಿಯಂತೆ ಪ್ಯಾನ್ ಕಾರ್ಡ್ ಅರ್ಜಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದು  ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ಯಾನ್ ಆದಾಯ ತೆರಿಗೆ ನೀಡುವ 10 ಸಂಖ್ಯೆಯ ವಿಶಿಷ್ಠ ಗುರುತಿನ ಕಾರ್ಡ್ ಆಗಿದ್ದು, ಆದಾಯ ತೆರಿಗೆ ಪಾವತಿಸುವಲ್ಲಿ ಇದರ ಅವಶ್ಯಕತೆ ಹೆಚ್ಚಿದ್ದು, ಇದರೊಂದಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಲಾಗಿದೆ.

ಮಾರ್ಚ್ 5ರೊಳಗಿನ ಮಾಹಿತಿಯಂತೆ  33 ಕೋಟಿ ಫ್ಯಾನ್ ಕಾರ್ಡ್ ಗಳಲ್ಲಿ   ಜನರಲ್ಲಿ 16.65  ಕೋಟಿ  ಆಧಾರ್  ನೊಂದಿಗೆ ಜೋಡಿಸಲಾಗಿದೆ.  ಇದರ ಅಂತಿಮ ಗಡುವನ್ನು ಜೂನ್ 30 ರವರೆಗೂ ವಿಸ್ತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com