ಮುಂಬೈ: ನೌಕಾಪಡೆ ಹೆಲಿಕಾಪ್ಟರ್ ಮುಂಬೈನ ಸ್ಯಾಂತಕ್ರೂಸ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪಷ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಲಿಕಾಪ್ಟರ್ ನಲ್ಲಿದ್ದ ಮೂವರು ಸಿಬ್ಬಂದಿ ಹಾಗೂ ಕಾಪ್ಟರ್ ಸಹ ಸುರಕ್ಷಿತವಾಗಿದೆ ಎಂದು ಪಶ್ಚಿಮ ನೌಕಾದಳದ ವಕ್ತಾರರು ಹೇಲಿದ್ದಾರೆ.
ಸೀಕಿಂಗ್ 42ಬಿ ಹೆಸರಿನ ನೌಕಾದಳದ ಹೆಲಿಕಾಪ್ಟರ್ ಮಂಗಳವಾರ ರಾತ್ರಿ ಎಂಟರ ವೇಳೆ ಮುಂಬೈನಲ್ಲಿ ತುರ್ತು ಭೂಸ್ಪರ್ಷ ಮಾಡಿದೆ. ಎಂಜಿನ್ ನಲ್ಲಿ ತೊಂದರೆ ಕಾಣಿಸಿಕೊಂಡಿದ್ದ ಕಾರಣ ಹೆಲಿಕಾಪ್ಟರ್ ಭೂಸ್ಪರ್ಷ ಮಾಡಿದ್ದಾಗಿ ತಿಳಿದು ಬಂದಿದೆ.
ಎಂಜಿನ್ ಸಮಸ್ಯೆಯಾಗಿರುವುದನ್ನು ಗುರುತಿಸಿದ ಪೈಲಟ್ ತಕ್ಷಣ ಕಾಪ್ಟರ್ ನ್ನು ಲ್ಯಾಂಡಿಂಗ್ ಮಾಡಿದ್ದಾರೆ. ಎಂಜಿನ್ ದೋಷವನ್ನು ಸರಿಪಡಿಸಲಾಗುವುದು, ಘಟನೆ ಸಂಬಂಧ ತನಿಖೆ ಕೈಗೊಳ್ಳಲಾಗುತ್ತದೆ ಎಂದು ನೌಕಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.