
ಪಾಟ್ನಾ : ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿಗೆ ನೀಡಿದ್ದ ಭದ್ರತಾ ಸಿಬ್ಬಂದಿಯನ್ನು ಸರ್ಕಾರ ಹಿಂತೆಗೆದುಕೊಂಡಿದ್ದು, ಆಕೆಯ ಕುಟುಂಬದಲ್ಲಿ ಏನಾದರೂ ಅಹಿತರ ಘಟನೆ ನಡೆದರೆ ಗೃಹ ಸಚಿವಾಲಯವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ರಾಬ್ಡಿದೇವಿ ಹೇಳಿದ್ದಾರೆ.
ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪತ್ನಿಯಾಗಿರುವ ರಾಬ್ಡಿದೇವಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದು,ಯಾವುದೇ ನೋಟಿಸ್ ನೀಡದೆ ತಮ್ಮ ನಿವಾಸದಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳಲಾಗಿದೆ . ತಮ್ಮ ಕುಟುಂಬ ಹಾಗೂ ನಿವಾಸದ ಸುರಕ್ಷತೆಯಲ್ಲಿ ರಾಜೀ ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.
ಮೇವು ಹಗರಣದಲ್ಲಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಲಾಲೂ ಪ್ರಸಾದ್ ಯಾದವ್ ಜೈಲು ಸೇರಿದ ನಂತರ ಭದ್ರತಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ರಾಜ್ಯಸರ್ಕಾರ ಆದೇಶ ಮಾಡಿದ್ದರೂ ರಾಬ್ಡಿ ಮತ್ತು ಆಕೆಯ ಕುಟುಂಬಕ್ಕೆ ನೀಡಿದ್ದ ಭದ್ರತಾ ಸಿಬ್ಬಂದಿಯನ್ನು ವಜಾ ಮಾಡಿರಲಿಲ್ಲ.
ಇದೀಗ ತಮ್ಮಗೆ ನೀಡಿದ ಭದ್ರತಾ ಸಿಬ್ಬಂದಿಯನ್ನು ಹಿಂತೆಗೆದುಕೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆದರೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೇ ನೇರ ಹೊಣೆಯಾಗಿರುತ್ತಾರೆ ಎಂದು ರಾಬ್ಡಿದೇವಿ ಹೇಳಿದ್ದಾರೆ.
ರಾಬ್ಡಿದೇವಿ ನಿವಾಸಕ್ಕೆ ಒದಗಿಸಿದ ಭದ್ರತಾ ಸಿಬ್ಬಂದಿಯನ್ನು ವಜಾಗೊಳಿಸುವ ಮೂಲಕ ಪಿತೂರಿ ನಡೆಸಲಾಗುತ್ತಿದೆ .ಮುಖ್ಯಮಂತ್ರಿ ನಿತೀಶ್ ಕುಮಾರ್, ಸುಶೀಲ್ ಮೋದಿ ಹಾಗೂ ಸರ್ಕಾರದಿಂದ ಪಿತೂರಿ ನಡೆಸಲಾಗಿದೆ ಎಂದು ರಾಬ್ಡಿದೇವಿ ಆರೋಪಿಸಿದ್ದಾರೆ.
ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿದ್ದು, ಪ್ರತಿದಿನ ಸಾಯುತ್ತಿದ್ದಾರೆ. ಕಾಯಿಲೆಯಿಂದ ಸಾಯುತ್ತಿದ್ದೀರಾ ಅಥವಾ ಔಷಧಿ ಬಳಸುವುದರಿಂದ ಸಾಯುತ್ತಿದ್ದಾರೆ ಎಂಬ ಬಗ್ಗೆ ಗೊತ್ತಿಲ್ಲ. ಅವರಿಗೆ ಮಧುಮೇಹ ಜಾಸ್ತಿಯಾಗಿದೆ, ಅವರನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ಸರ್ಕಾರ ಹೇಳಿದ್ದರೆ ,ಅದನ್ನು ಮಾಡಲು ಸಿದ್ಧವಿರುವುದಾಗಿ ಸುದ್ದಿಸಂಸ್ಥೆಯೊಂದಕ್ಕೆ ರಾಬ್ಡಿದೇವಿ ಹೇಳಿದ್ದಾರೆ.
ಪಾಟ್ನಾದಲ್ಲಿನ ರಾಬ್ಡಿದೇವಿ ನಿವಾಸದ ಭದ್ರತೆಗೆ ನಿಯೋಜಿಸಲಾಗಿದ್ದ 32 ಬಿಹಾರಿ ಮಿಲಿಟರಿ ಪೊಲೀಸರನ್ನು ಬಿಹಾರ ಸರ್ಕಾರ ವಜಾಪಡಿಸಿದೆ. ನಿನ್ನೆ ರಾತ್ರಿ ತಮ್ಮೆಲ್ಲಾ ವಸ್ತುಗಳನ್ನು ಗಟ್ಟುಮೂಟ್ಟೆ ಕಟ್ಟಿಕೊಂಡು ಭದ್ರತಾ ಸಿಬ್ಬಂದಿಗಳು ಜಾಗ ಖಾಲಿ ಮಾಡಿದ್ದಾರೆ.
Advertisement