ರಕ್ಷಣಾ ಖರೀದಿ ನೀತಿ ಬಗ್ಗೆ ದೇಶೀಯ, ವಿದೇಶಿ ಸಂಸ್ಥೆಗಳೊಂದಿಗೆ ಸಮಾಲೋಚನೆ- ಪ್ರಧಾನಿ ಮೋದಿ

ರಕ್ಷಣಾ ಉತ್ಪನ್ನ ಮತ್ತು ಸಂಗ್ರಹಣಾ ನೀತಿಯ ಬಗ್ಗೆ ದೇಶಿಯ ಹಾಗೂ ವಿದೇಶಿಯ ಸಂಸ್ಥೆಗಳ ಪ್ರಮುಖ ಷೇರುದಾರರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರಮೋದಿ
ಪ್ರಧಾನಿ ನರೇಂದ್ರಮೋದಿ

ಚೆನ್ನೈ : ಭಾರತದಲ್ಲಿಯೇ ರಕ್ಷಣಾ ಉತ್ಪನ್ನ ಉತ್ಪಾದಿಸುವ ನಿಟ್ಟಿನಲ್ಲಿ ರಕ್ಷಣಾ ಉತ್ಪನ್ನ ಮತ್ತು ಖರೀದಿ ನೀತಿಯ ಬಗ್ಗೆ ದೇಶಿಯ ಹಾಗೂ ವಿದೇಶಿಯ ಸಂಸ್ಥೆಗಳ ಪ್ರಮುಖ ಷೇರುದಾರರೊಂದಿಗೆ  ಸಮಾಲೋಚನೆ ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

ರಕ್ಷಣಾ ಇಲಾಖೆಯ ಡಿಫೆನ್ಸ್ ಎಕ್ಸ್'ಪೋ-2018 ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ಷಣಾ ಉದ್ಯಮ ಸಂಕೀರ್ಣ  ಸ್ಥಾಪಿಸಲು  ಸರ್ಕಾರ ಗಮನ ಕೇಂದ್ರೀಕರಿಸಿದ್ದು, ಆ ಗುರಿ ಸಾಧನೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತಿದೆ  ಎಂದರು.

ಸಾರ್ವಜನಿಕ , ಖಾಸಗಿ , ಹಾಗೂ ವಿದೇಶಿ ಸಂಸ್ಥೆಗಳೊಂದಿಗೆ ರಕ್ಷಣಾ ಉದ್ಯಮ ಸಂಕೀರ್ಣ ಸ್ಥಾಪಿಸಲು ಬದ್ಧವಿರುವುದಾಗಿ ಹೇಳಿದ ಪ್ರಧಾನಿ ಹೇಳಿದರು.

ದೇಶಿಯ ರಕ್ಷಣಾ ಉದ್ಯಮ ಪ್ರೋತ್ಸಾಹಿಸುವ ಮೂಲಕ 2025 ರೊಳಗೆ  ರಕ್ಷಣಾ ಸಾಮಾಗ್ರಿ ಮತ್ತು ಸೇವೆಯಲ್ಲಿ  1, 70, 000 ಕೋಟಿ  ರೂ ಆದಾಯ ಗಳಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯ ಕಳೆದ ತಿಂಗಳು ಕರಡು ನೀತಿ ಸಿದ್ದಪಡಿಸಿದ್ದು,  ಮುಂದಿನ ಎರಡು ತಿಂಗಳೊಳಗೆ ಈ ನೀತಿ ಅಂತಿಮವಾಗಲಿದೆ ಎಂದರು.

ರಕ್ಷಣಾ ಉಪಕರಣ ಖರೀದಿಗಾಗಿ ಭಾರತ  ಮುಂದಿನ ಐದು ವರ್ಷಗಳಲ್ಲಿ  300 ಬಿಲಿಯನ್  ಅಮೆರಿಕನ್ ಡಾಲರ್ ನಷ್ಟು ವೆಚ್ಚ ಮಾಡಲಿದ್ದು, ಜಾಗತಿಕ ಮಟ್ಟದ ಎಲ್ಲಾ ರಕ್ಷಣಾ ಸಂಸ್ಥೆಗಳು ಇದರ ಮೇಲೆ ಕಣ್ಣಿಟ್ಟಿವೆ ಎಂದು ನರೇಂದ್ರಮೋದಿ ಹೇಳಿದರು.

 ಇದೇ ವೇಳೆ  ಇನ್ನೋವೇಶನ್  ಪಾರ್ ಡಿಫೆನ್ಸ್ ಎಕ್ಸಲೇನ್ಸ್   ಯೋಜನೆಗೆ ಚಾಲನೆ ನೀಡಿದ  ಪ್ರಧಾನಿ,  ಈ ಯೋಜನೆಯಡಿ  ದೇಶಾದ್ಯಂತ  ರಕ್ಷಣಾ ಅನ್ವೇಷಣಾ ಉದ್ಯಮ ಸ್ಥಾಪಿಸಿ  ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್ ಪ್ರೋತ್ಸಾಹಿಸಲಾಗುವುದು ಎಂದು ಮೋದಿ ಹೇಳಿದರು.

ತಮಿಳುನಾಡು ಹಾಗೂ ಉತ್ತರ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಕ್ಷಣಾ ಉದ್ಯಮ ಕಾರಿಡಾರ್ ಬಗ್ಗೆಯೂ ಮಾತನಾಡಿದ ಮೋದಿ, ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ವಲಯದಿಂದಲೂ ಬಂಡವಾಳ  ಹೂಡಿಕೆ ಆಕರ್ಷಿಸಲು ಸ್ಟಾರ್ಟ್ ಅಪ್ ಉತ್ತೇಜಿಸಲಾಗುವುದು ಎಂದು ತಿಳಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com