ಸ್ವದೇಶಿ ನಿರ್ಮಿತ 'ನಾವಿಕ್' ಸಮೂಹದ 8ನೇ ಉಪಗ್ರಹ ಯಶಸ್ವಿ ಉಡಾವಣೆ

ಸ್ವದೇಶಿ ನಿರ್ಮಿತ ಪ್ರಾದೇಶಿಕ ದಿಕ್ಸೂಚಿ ಉಪಗ್ರಹವನ್ನು ಹೊಂದುವ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ನಾವಿಕ್, ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ...
ಐಎರ್ ಎನ್ ಎಸ್ ಎಸ್-1ಐ
ಐಎರ್ ಎನ್ ಎಸ್ ಎಸ್-1ಐ
Updated on
ನವದೆಹಲಿ: ಸ್ವದೇಶಿ ನಿರ್ಮಿತ ಪ್ರಾದೇಶಿಕ ದಿಕ್ಸೂಚಿ ಉಪಗ್ರಹವನ್ನು ಹೊಂದುವ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ನಾವಿಕ್, ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ 8ನೇ ಉಪಗ್ರಹ ಐಆರ್ ಎನ್ ಎಸ್ ಎಸ್ ಇನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. 
ಶ್ರೀಹರಿ ಕೋಟಾದಲ್ಲಿರುವ ಬಾಹ್ಯಾಕಾಶ ಸಂಶೋಧನಾ ಕೇಂದ್ರ ವಲಯದಿಂದ ಪಿಎಸ್ಎಲ್ವಿ-ಸಿ41 ಮೂಲಕ ಐಆರ್ಎನ್ಎಸ್ಎಸ್-1I ಉಪಗ್ರಹವನ್ನು ಬೆಳಗ್ಗೆ 4.04ರ ಸುಮಾರಿಗೆ ನಭಕ್ಕೆ ಉಡಾವಣೆಗೊಳಿಸಿದೆ. ನಿಗದಿತ ಕಕ್ಷೆಗೆ ಸೇರಿಸಲು 19 ನಿಮಷಗಳನ್ನು ತೆಗೆದುಕೊಂಡಿದೆ. ಈ ಉಪಗ್ರಹ ನಾವಿಗೇಷನ್ ಮತ್ತು ರೇಂಜಿಂಗ್ ಕಾರ್ಯಾಚರಣೆ ನಡೆಸಲಿದೆ. 
ಕಕ್ಷೆಯಲ್ಲಿ ದೋಷಯುಕ್ತ ಕಾರ್ಯ ನಿರ್ವಹಣೆಯಲ್ಲಿರುವ ಐಆರ್ಎನ್ಎಸ್ಎಸ್-1ಎ ಬದಲಿಗೆ ಪಿಎಸ್ಎಲ್ವಿ-ಸಿ4 ಅನ್ನು ಉಡಾವಣೆ ಮಾಡಲಾಗಿದೆ. 
ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ ಅಭಿವೃದ್ಧಿ ಪಡಿಸುತ್ತಿರುವ ದೇಶದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಇದೇ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವದಲ್ಲಿ ಐಆರ್​ಎನ್​ ಎಸ್​ಎಸ್- 1ಹೆಚ್  ಉಪಗ್ರಹವನ್ನು ನಿರ್ವಿುಸಿದೆ.
ದಿಕ್ಸೂಚಿ ವ್ಯವಸ್ಥೆಗಾಗಿ ಇಷ್ಟು ದಿನ ಭಾರತ ವಿದೇಶಿ ಉಪಗ್ರಹಗಳನ್ನು ಅವಲಂಭಿಸಿತ್ತು, ಈ ಸೇವೆ ತೀರಾ ದುಬಾರಿಯಾಗಿತ್ತು. ಹೀಗಾಗಿ ನಮ್ಮದೇ ಸ್ವದೇಶಿ ದಿಕ್ಸೂಚಿ ಉಪಗ್ರಹವನ್ನು ಹೊಂದುವ ಆಸೆಗೆ ಇಸ್ರೋ ನಾವಿಕ್ ಯಜನೆ  ಮೂಲಕ ನೀರೆರೆದಿದ್ದು, ಈ ಸಂಬಂಧ ಈಗಾಗಲೇ 7 ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿದೆ. ಐಆರ್​ಎನ್​ ಎಸ್​ಎಸ್- 1ಹೆಚ್  ಈ ಸರಣಿಯ 8ನೇ ಉಪಗ್ರಹವಾಗಿದೆ.
ಈ ಉಪಗ್ರಹ ನಿರ್ಮಾಣದಲ್ಲಿ  ಬೆಂಗಳೂರು ಮೂಲದ ಸಂಸ್ಥೆಯೂ ಸೇರಿದಂತೆ ಒಟ್ಟು ಆರು ಖಾಸಗಿ ಸಂಸ್ಥೆಗಳು ಸಹಭಾಗಿತ್ವ ಹೊಂದಿದ್ದು, ಈ ಸಂಸ್ಥೆಗಳು ಉಪಗ್ರಹದ ಕೆಲವೊಂದು ಭಾಗಗಳನ್ನು ಅಭಿವೃದ್ಧಿಪಡಿಸಿವೆ. ಐಆರ್ ​ಎನ್​ ಎಸ್​ಎಸ್- 1ಹೆಚ್ ದೇಶೀಯ ಪ್ರಾದೇಶಿಕ ಸಂಚಾರದಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಈ ಯೋಜನೆ ಮೂಲಕ ವಿದೇಶದ ಮೇಲಿನ ಅವಲಂಬನೆ ತಪ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಸ್ವದೇಶಿ ದಿಕ್ಸೂಚಿ  ವ್ಯವಸ್ಥೆ ಅಸ್ತಿತ್ವಕ್ಕೆ ತರಲು ನಾವಿಕ್ ಯೋಜನೆಯನ್ನು ಇಸ್ರೋ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಐಆರ್​ ಎನ್​ ಎಸ್ ​ಎಸ್- 1ಹೆಚ್ ಉಡಾವಣೆ ಮಾಡಲಾಗುತ್ತಿದೆ.
ಈ ಯೋಜನೆಯಿಂದ ಕಡಿಮೆ ವೆಚ್ಚದಲ್ಲಿ ನಿಖರ ಫಲಿತಾಂಶ ಲಭ್ಯವಾಗುವ ನಿರೀಕ್ಷೆಯಿದೆ ಎಂದು ವಿಜ್ಞಾನಿಗಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶಿಯ ಉಪಗ್ರಹಗಳ ಉಡಾವಣೆಯ ಜತೆಗೆ, ವಿದೇಶಿ ಉಪಗ್ರಹಗಳು, ನ್ಯಾನೋ  ಉಪಗ್ರಹಗಳ ಉಡಾವಣೆಗೆ ಹಲವು ರಾಷ್ಟ್ರಗಳು ಭಾರತದ ನೆರವು ಬಯಸುತ್ತಿವೆ. ಹೀಗಾಗಿ ಬಾಹ್ಯಾಕಾಶ ಸಂಶೋಧನೆ ಮತ್ತು ಯೋಜನೆಯಲ್ಲಿ ಇಸ್ರೋ ಹೆಚ್ಚು ತೊಡಗಿಸಿಕೊಳ್ಳುತ್ತಿದೆ. ಈಗ ಇದರಲ್ಲಿ ಮೊದಲ ಬಾರಿಗೆ ಖಾಸಗಿ  ಕಂಪನಿಗಳಿಗೆ ಅವಕಾಶ ಕಲ್ಪಿಸಿರುವುದು ಮಹತ್ವ ಪಡೆದುಕೊಂಡಿದೆ.
ತ್ವರಿತವಾಗಿ ಉಪಗ್ರಹ ನಿರ್ಮಾಣ ಮತ್ತು ಉಡಾವಣೆಯ ಉದ್ದೇಶದಿಂದ ಇಸ್ರೋ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಿದ್ದು, ಈ ಉಪಗ್ರಹ ಯೋಜನೆಯಲ್ಲಿ ಶೇ. 25 ಖಾಸಗಿ ಸಹಭಾಗಿತ್ವವಿದೆ. ಅಂತೆಯೇ  ಉಡಾವಣೆಯ ಬಳಿಕದ ಯಶಸ್ಸನ್ನು ಅವಲೋಕಿಸಿ ಮುಂದೆ ಮತ್ತಷ್ಟು ಬಾಹ್ಯಾಕಾಶ ಯೋಜನೆಗಳಿಗೆ ಖಾಸಗಿ ಸಹಭಾಗಿತ್ವ ನೀಡುವ ಕುರಿತು ನಿರ್ಧರಿಸಲಾಗುತ್ತದೆ ಇಸ್ರೋ ಸ್ಪಷ್ಟಪಡಿಸಿದೆ.
ಇನ್ನು ಈ ಯೋಜನೆಯಲ್ಲಿ ಬೆಂಗಳೂರು ಮೂಲಕ ಅಲ್ಪಾ ಡಿಸೈನ್ ಟೆಕ್ನಾಲಜೀಸ್ ಎಂಬ ಖಾಸಗಿ ಬಾಹ್ಯಾಕಾಶ ಸಂಸ್ಥೆ ಕೂಡ ಈ ಯೋಜನೆಯಲ್ಲಿ ಪಾಲ್ಗೊಂಡಿದೆ. ಐಆರ್ ಎನ್ ಎಸ್ ಎಸ್-1ಹೆಚ್ ಉಪಗ್ರಹವನ್ನು ಇಸ್ರೋದ  ಯಶಸ್ವೀ ಉಪಗ್ರಹ ಉಡಾವಣಾ ವಾಹಕ ಪಿಎಸ್ ಎಲ್ ವಿ ಹೊತ್ತು ಸಾಗಲಿದ್ದು, ಇದಕ್ಕಾಗಿ ಪಿಎಸ್ ಎಲ್ ವಿ ರಾಕೆಟ್ ಗೆ ಆರು ಹೆಚ್ಚುವರಿ ಬೂಸ್ಟರ್​ಗಳನ್ನು ಅಳವಡಿಸಲಾಗಿದೆ. ಪಿಎಸ್​ಎಲ್​ವಿ ಸರಣಿಯ ಸಿ39ನೇ ಯೋಜನೆ  ಇದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com