ಉತ್ತರ ಪ್ರದೇಶದಲ್ಲಿ ಮತ್ತೊಂದು ಅಂಬೇಡ್ಕರ್ ಪ್ರತಿಮೆ ಧ್ವಂಸ

ದಲಿತ ನಾಯಕ ಡಾ. ಬಿ.ಆರ್ ಅಂಬೇಡ್ಕರ್ ಅವರ 127ನೇ ಜಯಂತಿಯ ಮುನ್ನಾ ದಿನವೇ ಉತ್ತರ ಪ್ರದೇಶದಲ್ಲಿ...
ಅಂಬೇಡ್ಕರ್ ಪ್ರತಿಮೆ
ಅಂಬೇಡ್ಕರ್ ಪ್ರತಿಮೆ
ಲಖನೌ: ದಲಿತ ನಾಯಕ ಡಾ. ಬಿ.ಆರ್ ಅಂಬೇಡ್ಕರ್ ಅವರ 127ನೇ ಜಯಂತಿಯ ಮುನ್ನಾ ದಿನವೇ ಉತ್ತರ ಪ್ರದೇಶದಲ್ಲಿ ದುಷ್ಕರ್ಮಿಗಳು ಸಂವಿಧಾನ ಶಿಲ್ಪಿಯ ಮತ್ತೊಂದು ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ.
ಉತ್ತರ ಪ್ರದೇಶದ ಜೋನ್ಪುರ್ ಜಿಲ್ಲೆಯ ಗಜ್ನಾ ಗ್ರಾಮದಲ್ಲಿದ್ದ ಅಂಬೇಡ್ಕರ್ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಎರಡು ಅಡಿ ಉದ್ದದ ಅಂಬೇಡ್ಕರ್ ಪ್ರತಿಮೆಯನ್ನು ದುಷ್ಕರ್ಮಿಗಳು ಕಟ್ಟೆಯಿಂದ ಕಿತ್ತು ಕೆಳಗಿಟ್ಟಿದ್ದು, ಪ್ರತಿಮೆಯ ಶೂಗಳು ಕಾಣೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಕಿಡಿಗೇಡಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲಹಬಾದ್,  ಸಿದ್ಧಾರ್ಥ್ ನಗರ ಸೇರಿದಂತೆ ಕಳೆದ ಒಂದು ತಿಂಗಳಿಂದ ಉತ್ತರ ಪ್ರದೇಶದ ಹಲವು ಕಡೆ ಸುಮಾರು ಒಂದು ಡಜನ್ ಗೂ ಹೆಚ್ಚು ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
ನಾಳೆ ದೇಶಾದ್ಯಂತ ಅಂಬೇಡ್ಕರ್ ಅವರ 127ನೇ ಜಯಂತಿ ಆಚರಿಸಲಾಗುತ್ತಿದ್ದು, ಪ್ರತಿಮೆ ಹಾನಿಗೊಳಿಸುವ ಯತ್ನ ತಡೆಯಲು ಪೊಲೀಸರು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com