ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಅರ್ಥಮಾಡಿಕೊಳ್ಳಲು ಸ್ವಂತ ಮಗಳೇ ಆಗಬೇಕೆ? ಒಬ್ಬ ವ್ಯಕ್ತಿಯಾಗಿ, ತಂದೆಯಾಗಿ ಹಾಗೂ ದೇಶದ ನಾಗರೀಕನಾಗಿ ನನಲ್ಲಿ ಕೋಪಬರುತ್ತಿದೆ. ನನ್ನನ್ನು ಕ್ಷಮಿಸು ಮಗಳೇ. ನಿನಗೆ ಈ ದೇಶವನ್ನು ಸುರಕ್ಷಿತ ಪ್ರದೇಶ ಮಾಡಲು ಸಾಧ್ಯವಾಗಲಿಲ್ಲ. ನಿನ್ನಂತಿರುವ ಭವಿಷ್ಯದ ಮಕ್ಕಳ ನ್ಯಾಯಕ್ಕಾಗಿ ನಾನು ಹೋರಾಡುತ್ತೇನೆ. ನಾವು ದುಃಖಪಡುತ್ತಿದ್ದೇವೆ, ನನ್ನನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.