ಪ್ಯಾರಿಸ್: ಅಮೆರಿಕ ಸಿರಿಯಾ ಮೇಲೆ ನಡೆಸಿರುವ ವೈಮಾನಿಕ ದಾಳಿಯಲ್ಲಿ ಸಿರಿಯಾದ ರಾಸಯನಿಕ ಶಸ್ತ್ರಾಗಾರಕ್ಕೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ ಎಂದು ಫ್ರಾನ್ಸ್ ಹೇಳಿದೆ.
ಪ್ರಾನ್ಸ್ ನ ವಿದೇಶಾಂಗ ಸಚಿವ ಈ ಬಗ್ಗೆ ಮಾತನಾಡಿದ್ದು, ಬ್ರಿಟನ್, ಫ್ರಾನ್ಸ್, ಅಮೆರಿಕದಿಂದ ಸಿರಿಯಾ ಮೇಲೆ ನಡೆದಿರುವ ವೈಮಾನಿಕ ದಾಳಿಯಿಂದಾಗಿ ಸಿರಿಯಾದಲ್ಲಿನ ಬಹುತೇಕ ರಾಸಯನಿಕ ಶಸ್ತ್ರಾಗರಗಳು ಹಾಗೂ ಅಲ್ಲಿದ್ದ ನಾಶವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಡೌಮಾದಲ್ಲಿ ನಡೆದಿರುವ ಅನಿಲ ದಾಳಿಯ ಹಿಂದೆ ಸಿರಿಯಾ ಅಧ್ಯಕ್ಷರ ಕೈವಾಡವಿದ್ದ ಬಗ್ಗೆ ಫ್ರಾನ್ಸ್ ಗೆ ಸ್ಪಷ್ಟ ಗುಪ್ತಚರ ಮಾಹಿತಿ ಲಭ್ಯವಾಗಿದೆ ಎಂದು ಪ್ರಾನ್ಸ್ ನ ವಿದೇಶಾಂಗ ಸಚಿವ ಜೀನ್-ವೈಸ್ ಲೆ ಡ್ರಯಾನ್ ತಿಳಿಸಿದ್ದಾರೆ.