ಸಿಖ್ ಉಗ್ರರಿಗೆ ಪಾಕಿಸ್ತಾನ ಬೆಂಬಲ ನೀಡಿರುವ ಕುರಿತು ಸಾಕ್ಷ್ಯಾಧಾರಗಳು ಲಭ್ಯ

ದುರುದ್ದೇಶದಿಂದ ಸಿಖ್ ಉಗ್ರರಿಗೆ ಪಾಕಿಸ್ತಾನ ಮೂಲದ ಜೈಷ್ ಎ ಮೊಹಮ್ಮದ್ ಮತ್ತು ಜಮತ್ ಉದ್ ದವನ್ ಬೆಂಬಲ ನೀಡಿರುವ ಬಗ್ಗೆ ಪೋಟೋವೊಂದರ ಸಾಕ್ಷ್ಯಾಧಾರ ಲಭ್ಯವಾಗಿದೆ..
ಗೋಪಾಲ್ ಸಿಂಗ್ ಚಾವಲ್ ಅವರೊಂದಿಗೆ    ಜಮತ್ ಉದ್ ದವನ್ ಮುಖ್ಯಸ್ಥ ಹಫೀಜ್ ಸಯ್ಯದ್   ಇರುವ ಚಿತ್ರ
ಗೋಪಾಲ್ ಸಿಂಗ್ ಚಾವಲ್ ಅವರೊಂದಿಗೆ ಜಮತ್ ಉದ್ ದವನ್ ಮುಖ್ಯಸ್ಥ ಹಫೀಜ್ ಸಯ್ಯದ್ ಇರುವ ಚಿತ್ರ

ನವದೆಹಲಿ: ದುರುದ್ದೇಶದಿಂದ ಸಿಖ್ ಉಗ್ರರಿಗೆ ಪಾಕಿಸ್ತಾನ ಮೂಲದ ಜೈಷ್ ಎ ಮೊಹಮ್ಮದ್ ಮತ್ತು ಜಮತ್ ಉದ್ ದವನ್ ಬೆಂಬಲ ನೀಡಿರುವ ಬಗ್ಗೆ ಪೋಟೋವೊಂದರ ಸಾಕ್ಷ್ಯಾಧಾರ ಲಭ್ಯವಾಗಿದೆ..

ಲಾಹೋರ್ ನಲ್ಲಿ ಸಿಖ್ ಉಗ್ರ ನಾಯಕ ಗೋಪಾಲ್ ಸಿಂಗ್ ಚಾವಲ್ ಅವರೊಂದಿಗೆ    ಜಮತ್ ಉದ್ ದವನ್ ಮುಖ್ಯಸ್ಥ ಹಫೀಜ್ ಸಯ್ಯದ್  ಕಾಣಿಸಿಕೊಂಡಿರುವ ಪೊಟೋವೊಂದು ಹರಿದಾಡುತ್ತಿದೆ.

ಪಾಕಿಸ್ತಾನದ ಸಂಸ್ಥೆಯೊಂದರ ಸೂಚನೆ ಮೇರೆಗೆ ಏ.14 ರಂದು ಗುರುದ್ವಾರ  ಪಂಜ್ ಸಾಹೇಬ್ ನಿಂದ ಬಂದ ಭಾರತೀಯ ಅಧಿಕಾರಿಗಳನ್ನು ಇತ್ತೀಚಿಗೆ ಗೋಪಾಲ್ ಸಿಂಗ್ ಚಾವಲ್  ತಡೆ ಹಿಡಿದಿದ್ದ.ಏಪ್ರಿಲ್ 12 ರಂದು  ಸಿಖ್  ಯಾತ್ರಾರ್ಥಿಗಳಿಂದ ಅಧಿಕಾರಿಗಳನ್ನ ತಡೆ ಹಿಡಿಯಲಾಗಿತ್ತು, ಭಾರತೀಯ ಯಾತ್ರಾರ್ಥಿಗಳಿಗೆ ನೆರವು ನೀಡಲು ರಾಯಬಾರ ಅಧಿಕಾರಿಗಳು ಹೊರಟ್ಟಿದ್ದರು.

1800 ಭಾರತೀಯ ಯಾತ್ರಾರ್ಥಿಗಳನ್ನೊಳಗೊಂಡ ತಂಡ    ಕಾಲ್ಸಾ 320 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪಾಕಿಸ್ತಾನಕ್ಕೆ ತೆರಳಿತ್ತು. ದ್ವಿಪಕ್ಷೀಯ ಒಪ್ಪಂದದ ಆಧಾರದ ಮೇಲೆ ಈ ಭಕ್ತಾಧಿಗಳು ಪ್ರವಾಸ ಕೈಗೊಂಡಿದ್ದರು. ಆದರೆ ಇದು ಭಾರತ ವಿರೋಧಿಯಾಗಿ  ಪ್ರಚಾರ ಪಡೆದಿತ್ತು.

 ಇದು ವಿಯನ್ನಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು  ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.







ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com