ಅಮೆರಿಕಾದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಕುಟುಂಬದ ಮೂವರು ಸದಸ್ಯರ ಮೃತದೇಹ ನದಿಯಲ್ಲಿ ಪತ್ತೆ

ಅಮೆರಿಕದಲ್ಲಿ ನಾಲ್ವರು ಭಾರತೀಯರ ಕುಟುಂಬವೊಂದು ಕಳೆದ ವಾರ ನಾಪತ್ತೆಯಾಗಿದ್ದು, ತೀವ್ರ ಹುಡುಕಾಟದ ಬಳಿಕ ನದಿಯೊಂದರಲ್ಲಿ ಕಾರಿನಲ್ಲಿ ಮೂವರ ಶವಗಳು ...
ನಾಪತ್ತೆಯಾಗಿರುವ ಕುಟುಂಬ
ನಾಪತ್ತೆಯಾಗಿರುವ ಕುಟುಂಬ
Updated on
ವಾಷಿಂಗ್ಟನ್: ಅಮೆರಿಕದಲ್ಲಿ ನಾಲ್ವರು ಭಾರತೀಯರ ಕುಟುಂಬವೊಂದು ಕಳೆದ ವಾರ ನಾಪತ್ತೆಯಾಗಿದ್ದು, ತೀವ್ರ ಹುಡುಕಾಟದ ಬಳಿಕ ನದಿಯೊಂದರಲ್ಲಿ ಕಾರಿನಲ್ಲಿ ಮೂವರ ಶವಗಳು ಪತ್ತೆಯಾಗಿವೆ.
ಇಯೆಲ್‌ ನದಿಯಲ್ಲಿ ಇಬ್ಬರ ಶವ ಎಸ್ ಯುವಿ ಕಾರಿನಲ್ಲಿ ಪತ್ತೆಯಾಗಿದ್ದು, ತನಿಖೆ ವೇಳೆ ಶವಗಳು ಸಂದೀಪ್‌ ತೊಟ್ಟಿಪಿಲ್ಲಿ ಮತ್ತು ಅವರ 9 ವರ್ಷದ ಪುತ್ರಿ ಸಾಚಿ ಯದ್ದು ಎಂದು ವಾಷಿಂಗ್ಟನ್‌ ಪೋಸ್ಟ್‌ನ ವರದಿ ಮಾಡಿದೆ.
ಒರೆಗಾನ್‌ದಿಂದ ಕ್ಯಾಲಿಫೋರ್ನಿಯಾಕ್ಕೆ ಎಸ್ ಯುವಿ  ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದೀಪ್‌ ತೊಟ್ಟಪಿಲ್ಲಿ ಕುಟುಂಬದ ನಾಲ್ವರು  ನಾಪತ್ತೆಯಾಗಿದ್ದರು. ಸಂದೀಪ್‌ ಮತ್ತು ಪುತ್ರಿಯ ಶವ ಪತ್ತೆಯಾಗುವ 2 ದಿನ ಮುನ್ನ ಪತ್ನಿ ಸೌಮ್ಯ ಶವವೂ ಪೊಲೀಸರಿಗೆ ಸಿಕ್ಕಿತ್ತು,. ಆದರೆ ಪುತ್ರ ಸಿದ್ಧಾಂತ್‌  ಎಲ್ಲಿದ್ದಾನೆ ಎಂಬುದು ತಿಳಿದು ಬಂದಿಲ್ಲ.
ಸರಿಸುಮಾರಾಗಿ ಬೆಳ್ಳಿಗ್ಗೆ 11:30 ರಲ್ಲಿ ಬೋಟಿಂಗ್ ತಂಡದ ಸದಸ್ಯರು ವರದಿ ಮಾಡಿದ ಕ್ರ್ಯಾಶ್ ಸೈಟ್ (ಡೌನ್ಸ್ಟ್ರೀಮ್) ನ ಉತ್ತರದಲ್ಲಿ ಸುಮಾರು 1/2 ಮೈಲುಗಳಷ್ಟು ನೀರು ಹೊರಸೂಸುವ ಗ್ಯಾಸೋಲಿನ್ ವಾಸನೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೋಧಕರು ನದಿಯಲ್ಲಿ ತನಿಖೆ ಮಾಡಲು ಪ್ರಾರಂಭಿಸಿದಾಗ ನೀರಿನ ಕೆಳಗೆ ಸುಮಾರು 4-6 ಅಡಿಗಳಷ್ಟು ಮುಳುಗಿಹೋದ ವಾಹನವನ್ನು ಪತ್ತೆಯಾಗಿದೆ"ಎಂದು ಕ್ಯಾಲಿಫೋರ್ನಿಯಾದ ಮೆಂಡೋಸಿನೊ ಕೌಂಟಿ ಶೆರಿಫ್ಸ್ ಆಫೀಸ್ ಹೇಳಿಕೆಯಲ್ಲಿ ತಿಳಿಸಿದೆ.
ಸ್ಯಾನ್ ಜೋಸ್ ಆರಕ್ಷಕ ಇಲಾಖೆಯ ಪ್ರಕಾರ, ಏಪ್ರಿಲ್ 6 ರಂದು ಸ್ಯಾನ್ ಜೋಸ್ ಪ್ರದೇಶದಲ್ಲಿ ಸ್ನೇಹಿತರನ್ನು ಭೇಟಿ ಮಾಡಲು ತೋಟಪಲ್ಲಿ ಕುಟುಂಬವು ಆಗಮಿಸಬೇಕಾಗಿತ್ತು .
ಈ ಕುರಿತಾಗಿ ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದು ಸಾವಿಗೆ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ. ಸಂದೀಪ್‌ ಗುಜರಾತ್‌ನ ಸೂರತ್‌ನಲ್ಲಿ ಹುಟ್ಟಿ ಬೆಳೆದವರಾಗಿದ್ದು, ಅಮೆರಿಕದಲ್ಲಿ 15 ವರ್ಷಗಳಿಂದ ನೆಲೆಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com