ದಿಢೀರ್ ನಗದು ಕೊರತೆಗೆ ಕಾರಣ ಏನು ಗೊತ್ತಾ?; 70 ಸಾವಿರ ಕೋಟಿ ನಗದು ಕೊರತೆ ಇದೆ ಎಂದ ಆರ್ ಬಿಐ ತನಿಖಾ ಸಮಿತಿ ವರದಿ!

ದೇಶದಲ್ಲಿ ಸುಮಾರು 70 ಸಾವಿರ ಕೋಟಿ ರೂ. ನಗದು ಕೊರತೆ ಇದ್ದು, ಅನಾಮಿಕ ವಲಯಗಳಲ್ಲಿ ಈ 70 ಸಾವಿರ ಕೋಟಿ ನಗದು ಚಲಾವಣೆಯಾಗದೇ ತಟಸ್ಥವಾಗಿ ಉಳಿದಿದೆ ಎಂದು ತನಿಖಾ ಸಮಿತಿ ವರದಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ನೋಟು ನಿಷೇಧ ಬಳಿಕ ಉಂಟಾಗಿದ್ದ ನಗದು ಕೊರತೆ ಮತ್ತೆ ದಿಢೀರ್ ವಾಪಸ್ ಆಗಿದ್ದು, ದೇಶದಲ್ಲಿ ನಗದು ಕೊರತೆ ಇಲ್ಲ ಎಂದು ಆರ್ ಬಿಐ ಹೇಳುತ್ತಿದ್ದರೂ ದೇಶದಲ್ಲಿ ಸುಮಾರು 70 ಸಾವಿರ ಕೋಟಿ ರೂ. ನಗದು ಕೊರತೆ ಇದ್ದು, ಅನಾಮಿಕ ವಲಯಗಳಲ್ಲಿ ಈ 70 ಸಾವಿರ ಕೋಟಿ ನಗದು ಚಲಾವಣೆಯಾಗದೇ ತಟಸ್ಥವಾಗಿ ಉಳಿದಿದೆ ಎಂದು ತನಿಖಾ ಸಮಿತಿ ವರದಿ ನೀಡಿದೆ.
ಕಳೆದ ನಾಲ್ಕೈದು ದಿನಗಳಿಂದ ದೇಶದಲ್ಲಿ ಉಂಟಾಗಿರುವ ನಗದು ಕೊರತೆ ಕುರಿತಂತೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗುರಿಯಾಗಿರುವಂತೆಯೇ ಭಾರತೀಯ ರಿಸರ್ವ್ ಬ್ಯಾಂಕ್ ನ ತನಿಖಾ ಸಮಿತಿ ದೇಶದಲ್ಲಿ ಸುಮಾರು 70 ಸಾವಿರ ಕೋಟಿ ನಗದು ಚಲಾವಣೆ ಸ್ಥಗಿತವಾಗಿದೆ ಎಂದು ತಿಳಿಸಿದೆ. ಅಂತೆಯೇ 2018ರ ಮಾರ್ಚ್ ತಿಂಗಳ ಅಂತ್ಯಕ್ಕೆ ದೇಶದಲ್ಲಿ 19.4  ಟ್ರಿಲಿಯನ್ ನಗದು ಚಲಾವಣೆಯಲ್ಲಿದ್ದು, ಈ ಪೈಕಿ ದೇಶದಲ್ಲಿ 17.5 ಟ್ರಿಲಿಯನ್ ನಗದು ಬಳಕೆಯಾಗುತ್ತಿದೆ. ಸುಮಾರು 1.9 ಟ್ರಿಲಿಯನ್ ನಗದಿನ ಕೊರತೆಯಿದೆ.  ಇನ್ನು ಕೇಂದ್ರ ಸರ್ಕಾರದ ಕನಸಿನ ಯೋಜನೆ ಡಿಜಿಟಲ್ ಹಣ ಪಾವತಿ ಪ್ರಮಾಣ ಕೇವಲ 1.2 ಟ್ರಿಲಿಯನ್ ಗಳಷ್ಟಿದೆ.
2018 ಆರ್ಥಿಕ ವರ್ಷದಲ್ಲಿ ಡೆಬಿಟ್ ಕಾರ್ಡ್ ಮೂಲಕ 15,291 ಬಿಲಿಯನ್ ಹಣವನ್ನು ಎಟಿಎಂಗಳಲ್ಲಿ ವಿತ್ ಡ್ರಾ ಮಾಡಲಾಗಿದ್ದು. ಕಳೆದ ಆರು ತಿಂಗಳ ಅವಧಿಯಲ್ಲಿ ಡೆಬಿಟ್ ಕಾರ್ಡ್ ಮೂಲಕ ಹಣ ವಿತ್ ಡ್ರಾ ಮಾಡುವ ಪ್ರಮಾಣದಲ್ಲಿ ಶೇ.12.2ರಷ್ಟು ಏರಿಕೆ ಕಂಡು ಬಂದಿದೆ. ಇನ್ನು ದೇಶದಲ್ಲಿ ಅಪಾರ ಪ್ರಮಾಣದ ನಗದು ಕೊರತೆ ಇದೆ ಎಂಬ ವರದಿಗಳ ತಳ್ಳಿ ಹಾಕಿರುವ ಆರ್ ಬಿಐ ತನಿಖಾ ಸಮಿತಿ, ಇಂತಹ ವರದಿಗಳು ಕುತೂಹಲಕಾರಿಯಾಗಿದೆ ಎಂದು ಹೇಳಿದೆಯಲ್ಲದೇ ಮತ್ತು ಇಂತಹ ತರ್ಕವನ್ನು ಸಮಿತಿ ನಿರಾಕರಿಸಿದೆ. ಇನ್ನು ದಿಢೀರ್ ನಗದು ಕೊರತೆಗೆ ಗರಿಷ್ಟ ಪ್ರಮಾಣದ ನೋಟುಗಳಾದ 2000 ಸಾವಿರ ರೂ.ಗಳ ನೋಟಿನ ಕೊರತೆಯೇ ಕಾರಣ ಎಂದು ಸಮಿತಿ ಅಭಿಪ್ರಾಯಪಟ್ಟಿದ್ದು, ಎಟಿಎಂಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮೌಲ್ಯದ ನೋಟುಗಳಾದ 100 ಮತ್ತು 500 ಮುಖಬೆಲೆಯ ನೋಟುಗಳನ್ನು ತುಂಬಿಸಲು ಸಾಧ್ಯವಾಗುತ್ತಿಲ್ಲ.
ಅಲ್ಲದೆ ಎಟಿಎಂಗೆ ನೋಟುಗಳನ್ನು ರವಾನೆ ಮಾಡುವ ವ್ಯವಸ್ಥೆಯಲ್ಲಿ ಲೋಪವೂ ಕೂಡ ದಿಢೀರ್ ನಗದು ಕೊರೆತೆಗೆ ಕಾರಣವಾಗಿರಬಹುದು ಎಂದು ಆರ್ ಬಿಐ ತನಿಖಾ ಸಮಿತಿ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಅಂತೆಯೇ ಮೇ ತಿಂಗಳ ನಾಲ್ಕನೇ ತ್ರೈಮಾಸಿಕ ಆರ್ಥಿಕ ಚಟುವಟಿಕೆಗಳು ಆರಂಭವಾಗಿರುವುದೂ ಕೂಡ ನೋಟು ಕೊರತೆಗೆ ಕಾರಣವಾಗಿರಬಹುದು ಎಂದು ಸಮಿತಿ ಹೇಳಿದೆ. 
ಇನ್ನು ದಕ್ಷಿಣ ಭಾರತದ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಸರ್ಕಾರ ಹಣಕಾಸಿನ ನಿರ್ಣಯ ಮತ್ತು ಠೇವಣಿ ವಿಮಾ ಮಸೂದೆ ಕುರಿತಂತೆ ಕಠಿಣ ನಿಲುವು ತಳೆಯಲಿದೆ. ಬ್ಯಾಂಕ್ ಗಳಲ್ಲಿ ನಗದಿನ ಸುರಕ್ಷತೆ ಕುರಿತು ಜನರಲ್ಲಿ ಎದ್ದಿರುವ ಆತಂಕ ಕೂಡ ಜನರು ತಮ್ಮ ತಮ್ಮ ಖಾತೆಯಲ್ಲಿರುವ ಹಣವನ್ನು ವಿತ್ ಡ್ರಾ ಮಾಡಲು ಪ್ರೇರೇಪಿಸಿದ್ದು ಹಣದ ಕೊರತೆಗೆ ಕಾರಣವಾಗಿರಬಹುದು ಎಂದು ಸಮಿತಿ ಶಂಕಿಸಿದೆ. ಹೀಗಾಗಿ ಜನರಲ್ಲಿ ನಗದನ್ನು ಬ್ಯಾಂಕ್ ಖಾತೆಗೆ ಡೆಪಾಸಿಟ್ ಮಾಡುವ ಕುರಿತು ಜನರಲ್ಲಿ ಅರಿವು ಮೂಡಿಸುವುದರಿಂದ ಪ್ರಸ್ತುತ ಎದುರಾಗಿರುವ ನಗದು ಕೊರತೆ ಸಮಸ್ಯೆಯನ್ನು ನೀಗಿಸಬಹುದು ಎಂದು ಸಮಿತಿ ಸಲಹೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com