ಆಧಾರ್ ವಿಫಲಗೊಳಿಸಲು ಕೆಲವರಿಂದ 'ಊಹಾತ್ಮಕ ಆತಂಕ': ಯುಐಡಿಎಐ

ವಿಶಿಷ್ಟ ಗುರುತಿನ ಪತ್ರ ಆಧಾರ್ ವಿಫಲಗೊಳಿಸಲು ಕೆಲವರು ಊಹಾತ್ಮಕ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಯುಐಡಿಎಐ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿಶಿಷ್ಟ ಗುರುತಿನ ಪತ್ರ ಆಧಾರ್ ವಿಫಲಗೊಳಿಸಲು ಕೆಲವರು ಊಹಾತ್ಮಕ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಯುಐಡಿಎಐ ಹೇಳಿದೆ.
ಮಾಧ್ಯಮ ವರದಿ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ  ಯುಐಡಿಎಐ, ಗೂಗಲ್ ಆಧಾರ್ ವಿಫಲಗೊಳಿಸಲು ಯತ್ನಿಸುತ್ತಿದೆ ಎಂಬ ಆರೋಪ ಸತ್ಯವಾದುದಲ್ಲ. ಆದರೆ ಕೆಲವರು ಆಧಾರ್ ವಿಫಲಗೊಳಿಸಲು ಊಹಾತ್ಮಕ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದೆ.
ಇನ್ನು ನಿನ್ನೆ ಸುಪ್ರೀಂ ಕೋರ್ಟ್ ನಲ್ಲಿ ಆಧಾರ್ ಕುರಿತ ವಿಚಾರಣೆಯಲ್ಲಿ ಯುಐಡಿಎಐ ಪರ ವಕೀಲ ರಾಕೇಶ್ ದ್ವಿವೇದಿ ಅವರು ತಮ್ಮ ವಾದ ಮಂಡಿಸುತ್ತಾ, ಆಧಾರ್ ವಿಫಲಗೊಳಿಸಲು ಗೂಗಲ್ ಯತ್ನಿಸುತ್ತಿದೆ ಎಂಬ ಆರೋಪ ಸತ್ಯವಾದುದಲ್ಲ. ಗೂಗಲ್, ಫೇಸ್ ಬುಕ್ ಮತ್ತು ಟ್ವಿಟರ್ ಕಾಳಜಿಯುಕ್ತವಾಗಿದ್ದು, ಆಧಾರ್ ಸುರಕ್ಷತೆಯ ಮಾದರಿ ವಿಭಿನ್ನಲವಾಗಿದೆ. ಆಧಾರ್ ನಲ್ಲಿ ಅತ್ಯುನ್ನತ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. 
ಕೆಲ ವಿದೇಶಿ ದತ್ತಾಂಶ ವಿಶ್ಲೇಷಣಾ ಸಂಸ್ಥೆಗಳು ದತ್ತಾಂಶ ವಿಶ್ಲೇಷಣೆಗೆ ಕೆಲ ತಾಂತ್ರಿಕ ಮಾರ್ಗಗಳನ್ನು ಅನುಸರಿಸುತ್ತಿದೆಯಾದರೂ, ಇಂತಹ ದತ್ತಾಂಶ ವಿಶ್ಲೇಷಣೆಗಳು ಆಧಾರ್ ನಲ್ಲಿ ಸಾಧ್ಯವಾಗುವುದಿಲ್ಲ. ಯಾವುದೇ ಮಾದರಿಯಿಂದಲೂ ಆಧಾರ್ ನಲ್ಲಿನ ಮಾಹಿತಿ ಸರ್ವೇಕ್ಷಣೆ ಅಸಾಧ್ಯ. ಮಾಹಿತಿ ಸಂಗ್ರಹ ಅಥವಾ ವಿಶ್ಲೇಷಣೆಗೆ ಆಧಾರ್ ಯಾವುದೇ ಕಾರಣಕ್ಕೂ ಅನುವು ಮಾಡಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com