ಮಹಾಭಾರತ ಯುಗದಲ್ಲೂ ಇಂಟರ್ನೆಟ್, ಸ್ಯಾಟೆಲೈಟ್ ಅಸ್ತಿತ್ವದಲ್ಲಿತ್ತು; ತ್ರಿಪುರ ಸಿಎಂ ಬಿಪ್ಲಾಬ್ ಕುಮಾರ್ ಡೆಬ್

ಮಹಾಭಾರತದ ಯುಗದಲ್ಲಿಯೂ ಇಂಟರ್ನೆಟ್, ಸ್ಯಾಟೆಲೈಟ್ ಅಸ್ತಿತ್ವದಲ್ಲಿತ್ತು ಎಂದು ತ್ರಿಪುರ ರಾಜ್ಯ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ಡೆಬ್ ಅವರು ಮಂಗಳವಾರ ಹೇಳಿದ್ದಾರೆ...
ತ್ರಿಪುರ ರಾಜ್ಯ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ಡೆಬ್
ತ್ರಿಪುರ ರಾಜ್ಯ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ಡೆಬ್
ಅಗರ್ತಲಾ; ಮಹಾಭಾರತದ ಯುಗದಲ್ಲಿಯೂ ಇಂಟರ್ನೆಟ್, ಸ್ಯಾಟೆಲೈಟ್ ಅಸ್ತಿತ್ವದಲ್ಲಿತ್ತು ಎಂದು ತ್ರಿಪುರ ರಾಜ್ಯ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ಡೆಬ್ ಅವರು ಮಂಗಳವಾರ ಹೇಳಿದ್ದಾರೆ. 
ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ (ಪಿಡಿಎಸ್) ಕಂಪ್ಯೂಟರೀಕರಣದ 2 ದಿನಗಳ ಕಾರ್ಯಾಗಾರದಲ್ಲಿ ಮಾತನಾಡಿರುವ ಅವರು, ಮಹಾಭಾರತದ ದಿನಗಳಲ್ಲಿಯೂ ಇಂಟರ್ನೆಟ್ ಹಾಗೂ ಸ್ಯಾಟೆಲೈಟ್ ಗಳು ಅಸ್ತಿತ್ವದಲ್ಲಿದ್ದವು. ಕುರುಕ್ಷೇತ್ರದಲ್ಲಿ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಧೃತರಾಷ್ಟ್ರನ ಸಾರಥಿಯಾಗಿದ್ದ ಸಂಜಯ ತಂತ್ರಜ್ಞಾನವನ್ನು ಬಳಸಿಕೊಂಡು ಧೃತರಾಷ್ಟ್ರನಿಗೆ ಯುದ್ಧ ಕುರಿತು ವಿವರಣೆಗಳನ್ನು ನೀಡುತ್ತಿದ್ದ ಎಂದು ಹೇಳಿದ್ದಾರೆ. 
ಯುರೋಪಿಯನ್ನರು ಹಾಗೂ ಅಮೆರಿಕನ್ನರು ಇಂಟರ್ನೆಟ್ ಹಾಗೂ ಸ್ಯಾಟೆಲೈಟ್ ಗಳನ್ನು ತಾವೇ ಪರಿಚಯಿಸಿದ್ದು ಎಂದು ಹೇಳುತ್ತಾರೆ. ಆದರೆ, ನಿಜ ಹೇಳಬೇಕೆಂದರೆ, ಲಕ್ಷಾಂತರ ವರ್ಷಗಳ ಹಿಂದೆಯೇ ಇಂಟರ್ನೆಟ್ ಹಾಗೂ ಸ್ಯಾಟೆಲೈಟ್ ಗಳಿದ್ದವು. ಇಲ್ಲದೇ ಹೋಗಿದ್ದರೆ, ಸಂಜಯನ ದೃಷ್ಟಿಯಿಂದ ಧೃತರಾಷ್ಟ್ರ ಕುರುಕ್ಷೇತ್ರ ಯುದ್ಧವನ್ನು ನೋಡಲು ಹೇಗೆ ಸಾಧ್ಯ? ಆ ಸಂದರ್ಭದಲ್ಲಿಯೂ ತಂತ್ರಜ್ಞಾನಗಳಿದ್ದವು. ಇಂಟರ್ನೆಟ್, ಸ್ಯಾಟೆಲೈಟ್ ಗಳಿದ್ದವು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com