ಈ ಬಗ್ಗೆ ಸ್ವತಃ ವಿಶ್ವ ಬ್ಯಾಂಕ್ ವರದಿ ನೀಡಿದ್ದು, ವಿಶ್ವಬ್ಯಾಂಕ್ ಗುರುವಾರ ಬಿಡುಗಡೆ ಮಾಡಿರುವ ಗ್ಲೋಬಲ್ ಫೈಂಡೆಕ್ಸ್ ಡೇಟಾಬೇಸ್ ನಲ್ಲಿ ಭಾರತದಲ್ಲಿ ಸುಮಾರು 19 ಕೋಟಿ ಯುವಕರು ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲ ಎಂದು ತಿಳಿದುಬಂದಿದೆ. ವಿಶ್ವದಲ್ಲೇ ಅತೀ ಹೆಚ್ಚು ಪ್ರಮಾಣದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿಲ್ಲದವರ ದೇಶದ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದು, ಬಳಿಕದ ಸ್ಥಾನದಲ್ಲಿ ಭಾರತವಿದೆ. ಇನ್ನು ಹಾಲಿ ಇರುವ ಬ್ಯಾಂಕ್ ಖಾತೆಗಳ ಪೈಕಿ ಶೇ.50ರಷ್ಟು ಖಾತೆಗಳು ನಿಷ್ಕ್ರಿಯವಾಗಿದೆ. ಅಂದರೆ ದೇಶದಲ್ಲಿ ಸುಮಾರು ಶೇ.11ರಷ್ಟು ಮಂದಿಗೆ ಬ್ಯಾಂಕ್ ಖಾತೆಯೇ ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.