ಕೊಚ್ಚಿ (ಕೇರಳ): ಪ್ರಧಾನಿ ನರೇಂದ್ರ ಮೋದಿ ಆಧುನಿಕ ಹಿಟ್ಲರ್ ಎಂದು ಕೇರಳ ಕಾಂಗ್ರೆಸ್ ಹಿರಿಯ ಮುಖಂಡ ಕೆವಿ ಥಾಮಸ್ ಕರೆದಿದ್ದಾರೆ.
ಕೇರಳ ಕೆಪಿಸಿಸಿ ಅಧ್ಯಕ್ಷ ಎಂಎಂ ಹಸನ್ ಆಯೋಜಿಸಿದ್ದ ಜನಮೋಚನ ಯಾತ್ರೆಯಲ್ಲಿ ಮಾತನಾಡಿದ ಕೆವಿ ಥಾಮಸ್, ಪ್ರಧಾನಿ ಮೋದಿ ಹಾಗೂ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಜನ ವಿರೋಧಿ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದಾಗಿ ಆರೋಪಿಸಿರುವ ಶ್ರೀಜಿತ್ ಅವರ ಪುತ್ರಿಯ ವಿದ್ಯಾಬ್ಯಾಸಕ್ಕಾಗಿ ತಮ್ಮ ಟ್ರಸ್ಟ್ ವತಿಯಿಂದ 2.5 ಲಕ್ಷ ರುಪಾಯಿ ನೀಡುವುದಾಗಿ ಘೋಷಿಸಿದ್ದಾರೆ.