ವಿಶೇಷ ಸ್ಥಾನಮಾನ ವಿವಾದ: ಜನ್ಮದಿನದಂದೇ 'ಧರ್ಮ ಹೋರಾಟ ದೀಕ್ಷೆ' ಆರಂಭಿಸಿದ ಆಂಧ್ರ ಸಿಎಂ ನಾಯ್ಡು
ದೇಶ
ವಿಶೇಷ ಸ್ಥಾನಮಾನ: ಜನ್ಮದಿನದಂದೇ 'ಧರ್ಮ ಹೋರಾಟ ದೀಕ್ಷೆ' ಆರಂಭಿಸಿದ ಆಂಧ್ರ ಸಿಎಂ ನಾಯ್ಡು
ರಾಜ್ಯಕ್ಕೆ ವಿಶೇಷ ಸ್ಥಾನಮಾ ಘೋಷಿಸುವಂತೆ ಆಗ್ರಹಿಸಿ ಹುಟ್ಟುಹಬ್ಬದ ದಿನದಂದೇ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, 'ಧರ್ಮ ಹೋರಾಟ ದೀಕ್ಷೆ' ಆರಂಭಿಸಿದ್ದಾರೆ...
ವಿಜಯವಾಡ: ರಾಜ್ಯಕ್ಕೆ ವಿಶೇಷ ಸ್ಥಾನಮಾ ಘೋಷಿಸುವಂತೆ ಆಗ್ರಹಿಸಿ ಹುಟ್ಟುಹಬ್ಬದ ದಿನದಂದೇ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, 'ಧರ್ಮ ಹೋರಾಟ ದೀಕ್ಷೆ' ಆರಂಭಿಸಿದ್ದಾರೆ.
ವಿಜಯವಾಡದ ಇಂದಿರಾ ಗಾಂಧಿ ಮೈದಾನದಲ್ಲಿ ಚಂದ್ರಬಾಬು ನಾಯ್ಡು ಅವರು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆಂದು ತಿಳಿದುಬಂದಿದೆ.
ಉಪವಾಸ ಸತ್ಯಾಗ್ರಹ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ಸಂಜೆ 7 ಗಂಟೆ ವರೆಗೂ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.
ಚಂದ್ರಬಾಬು ನಾಯ್ಡು 68ನೇ ವಸಂತಕ್ಕೆ ಕಾಲಿಟ್ಟಿದ್ದು, ರಾಜ್ಯದ ಹಿತಾಸಕ್ತಿಗಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವುದು ಆಂಧ್ರಪ್ರದೇಶ ಜನರ ಮೆಚ್ಚಿಗೆಗೆ ಕಾರಣವಾಗಿದೆ.
ಚಂದ್ರಬಾಬು ನಾಯ್ಡು ಅವರ ಹುಟ್ಟುಹಬ್ಬ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ