ದೆಹಲಿ: ದೀರ್ಘ ಕಾಲ ವಿದ್ಯುತ್ ಕಡಿತಕ್ಕೆ ಕೇಜ್ರಿವಾಲ್ ಸರ್ಕಾರದ ಪರಿಹಾರ; ಗ್ರಾಹಕರಿಗೆ ಗಂಟೆಗೆ ರೂ.50 ಪಾವತಿ

ರಾಷ್ಟ್ರ ರಾಜಧಾನಿ ದೆಹಲಿಯ ಜನರಿಗೆ ಈ ಬಾರಿಯ ಬೇಸಿಗೆ ಆರಂಭದಿಂದಲೂ ಧೀರ್ಘಕಾಲದ ವಿದ್ಯುತ್ ಕಡಿತಕ್ಕೆ ಕೇಜ್ರಿವಾಲ್ ಸರ್ಕಾರ ಪರಿಹಾರ ಘೋಷಿಸಿದೆ.
ಉಪ ಗೌರ್ನರ್ ಅನಿಲ್ ಬೈಜಲ್  ಮತ್ತು ಮುಖ್ಯಮಂತ್ರಿ ಕೇಜ್ರಿವಾಲ್
ಉಪ ಗೌರ್ನರ್ ಅನಿಲ್ ಬೈಜಲ್ ಮತ್ತು ಮುಖ್ಯಮಂತ್ರಿ ಕೇಜ್ರಿವಾಲ್

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ಜನರಿಗೆ ಈ ಬಾರಿಯ ಬೇಸಿಗೆ ಆರಂಭದಿಂದಲೂ   ಧೀರ್ಘಕಾಲದ ವಿದ್ಯುತ್ ಕಡಿತಕ್ಕೆ ಕೇಜ್ರಿವಾಲ್ ಸರ್ಕಾರ ಪರಿಹಾರ ಘೋಷಿಸಿದೆ.

 ಹಲವು ದಿನಗಳಿಂದ ಚರ್ಚೆ ನಡೆಯುತ್ತಿದ್ದ ಗ್ರಾಹಕರಿಗೆ ಪರಿಹಾರ ನೀಡುವ ನೀತಿಯನ್ನು  ಉಪ ಗೌರ್ನರ್ ಅನಿಲ್ ಬೈಜಲ್ ಅಂತಿಮಗೊಳಿಸಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಹೇಳಿದೆ.

ಉಪ ಗೌರ್ನರ್ ಅನಿಲ್ ಬೈಜಲ್ ಅವರ ಸಹಿ ಇಲ್ಲದೆ ಇಂತಹ ಯೋಜನೆಯನ್ನು ಈ ಹಿಂದೆ ಆಮ್ ಆದ್ಮಿ ಸರ್ಕಾರ ಘೋಷಣೆ ಮಾಡಿದ್ದರಿಂದ ಅದನ್ನು ರದ್ದುಗೊಳಿಸಲಾಗಿತ್ತು.

 ಇದೊಂದು ಕ್ರಾಂತಿಕಾರಕ ನಿರ್ಧಾರವಾಗಿದ್ದು, ವಿದ್ಯುತ್ ಪೂರೈಕೆ ಮಾಡುವ ಕಂಪನಿಗಳನ್ನು ನೇರವಾಗಿ  ಜನರಿಗೆ ಹೊಣೆಗಾರರನ್ನಾಗಿ ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ತಿಳಿಸಿದ್ದಾರೆ.

 ಈ ನೀತಿಯಡಿ ಯಾವುದೇ ತೊಂದರೆಯಿಲ್ಲದೆ 60 ನಿಮಿಷ ವಿದ್ಯುತ್ ಪಡೆಯಬಹುದಾಗಿದೆ. ಒಂದು ವೇಳೆ ವಿದ್ಯುತ್ ಪೂರೈಕೆ ಮಾಡುವ ಕಂಪನಿ ಈ ಅವಧಿಯನ್ನು ಪೂರ್ಣಗೊಳಿಸುವಲ್ಲಿ ವಿಫಲವಾದರೆ ದೂರು ನೀಡಿದ ಗ್ರಾಹಕರಿಗೆ   ಗಂಟೆಗೆ 50 ರೂ.ನಂತೆ   ದಂಡ ಪಾವತಿಸಬೇಕಾಗಿದೆ, ಎರಡು ಗಂಟೆಗೆ 100 ರೂ. ದಂಡವನ್ನು ಪಾವತಿಸಬೇಕಾಗಿದೆ.

 ದೆಹಲಿಯಲ್ಲಿ ಯಮುನಾ , ರಾಜಧಾನಿ ಮತ್ತು, ಟಾಟಾ ವಿದ್ಯುತ್  ಪೂರೈಕೆ ಕಂಪನಿಗಳು  ವಿದ್ಯುತ್ ಪೂರೈಕೆ ಮಾಡುತ್ತಿವೆ.

 ವಿದ್ಯುತ್ ಕೊರತೆಯಲ್ಲಿ ಅಡ್ಡಿಯಾದರೆ ಗ್ರಾಹಕರು ಮೊಬೈಲ್ ಪೋನ್,  ಆಪ್, ಅಥವಾ ವೆಬ್ ಸೈಟ್ ಮೂಲಕ ಪೂರ್ಣ ಮಾಹಿತಿ, ಸ್ವವಿವರದೊಂದಿಗೆ ವಿದ್ಯುತ್ ಪೂರೈಕೆ ಕಂಪನಿಗೆ ದೂರು ದಾಖಲಿಸಬೇಕಾಗುತ್ತದೆ. ನಂತರ ವಿದ್ಯುತ್ ಪೂರೈಕೆ ಸಂಬಂಧ ಕಂಪನಿ ಪ್ರತಿಕ್ರಿಯೆ ನೀಡಲಿದೆ.

 ಒಂದು ವೇಳೆ ಕಾಲಮಿತಿಯೊಳಗೆ ವಿದ್ಯುತ್ ಪೂರೈಸುವಲ್ಲಿ ಕಂಪನಿ ವಿಫಲವಾದ್ದಲ್ಲಿ ಯಾವುದೇ ವ್ಯಕ್ತಿಯ ಹಸ್ತಕ್ಷೇಪವಿಲ್ಲದೆ ಗ್ರಾಹಕರ ಖಾತೆಗೆ ದಂಡ ಪಾವತಿಸಬೇಕಾಗುತ್ತದೆ. ಗ್ರಾಹಕರ ಮಾಸಿಕ ಬಿಲ್ ನಲ್ಲಿ ದಂಡವನ್ನು ಸರಿಹೊಂದಿಸಿಕೊಳ್ಳಲಾಗುತ್ತದೆ.

ಈ ಯೋಜನೆಯಲ್ಲಿನ ಕಾರ್ಯಕ್ಷಮೆತೆ ಅತ್ಯಂತ ಪ್ರಮುಖವಾದ ಸಂಗತಿಯಾಗಿದೆ. ವಿದ್ಯುತ್ ಪೂರೈಕೆ ಕಂಪನಿಗಳು ಕಾಲಮಿತಿಯಲ್ಲಿ ವಿದ್ಯುತ್ ಪೂರೈಸಿದ್ದರೆ ಯಾವುದೇ ದಂಡ ಪಾವತಿಸಬೇಕಾದ ಪರಿಸ್ಥಿತಿ ಇರುವುದಿಲ್ಲ ಎಂದು ದೆಹಲಿ ವಿದ್ಯುತ್ ಇಲಾಖೆ ಮುಖ್ಯಸ್ಥ ವರ್ಷ ಜೋಶಿ ಹೇಳಿದ್ದಾರೆ.

 ಸ್ಥಳೀಯ ಮಾರ್ಗಗಳು ಅಥವಾ ಟ್ರಾನ್ಸ್ ಫರ್ಮರ್ಸ್ ದೋಷದಿಂದಾಗಿ ಕೆಲ ಸಂದರ್ಭಗಳಲ್ಲಿ ಮಾತ್ರ ದೀರ್ಘ ಕಾಲ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.





ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com