ಮಧ್ಯಪ್ರದೇಶದಲ್ಲಿ ಹೇಯ ಕೃತ್ಯ: 6 ತಿಂಗಳ ಹಸಿಗೂಸಿನ ಮೇಲೆ ಅತ್ಯಾಚಾರ, ಕೊಲೆ
ಉನ್ನಾವೋ, ಕತುವಾ, ಉತ್ತರಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ನಡೆದ ಅತ್ಯಾಚಾರ ಪ್ರಕರಣಗಳು ಮರೆ ಮಾಚುವ ಮುನ್ನವೇ, ಮಧ್ಯಪ್ರದೇಶದಲ್ಲಿ ನಡೆದಿರುವ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ...
ಇಂದೋರ್; ಉನ್ನಾವೋ, ಕತುವಾ, ಉತ್ತರಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ನಡೆದ ಅತ್ಯಾಚಾರ ಪ್ರಕರಣಗಳು ಮರೆ ಮಾಚುವ ಮುನ್ನವೇ, ಮಧ್ಯಪ್ರದೇಶದಲ್ಲಿ ನಡೆದಿರುವ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ.
6 ತಿಂಗಳ ಮಗುವನ್ನು ಅಪಹರಿಸಿದ ಶಿಶುಕಾಮಿಯೊಬ್ಬ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ರಾಜ್ವಾಡ ಕೋಟೆ ಸಮೀಪದ ಕಟ್ಟಡವೊಂದರಲ್ಲಿ ನೆಲಮಹಡಿಯಲ್ಲಿ ಮಗುವಿನ ರಕ್ತಸಿಕ್ತ ಮೃತದೇಹ ಪತ್ತೆಯಾಗಿದೆ. ಮಧ್ಯರಾತ್ರಿಯಿಂದ ಕಾಣೆಯಾಗಿದ್ದ 6 ತಿಂಗಳ ಹೆಣ್ಣು ಮಗು ಮಧ್ಯಾಹ್ನದ ವೇಳೆಗೆ ಶವವಾಗಿ ಪತ್ತೆಯಾಗಿದೆ.
ಮಗು ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಶೋಧ ನಡೆಸಿದ್ದ ಪೊಲೀಸರಿಗೆ ದಾರುಣ ಸ್ಥಿತಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.
ತನಿಖೆ ನಡೆಸಿದ ಪೊಲೀಸರು ಕಟ್ಟಡದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ರಕರಣ ಬಯಲಿಗೆ ಬಂದಿದೆ.
ಮಗುವಿನ ಪೋಷಕರಿಗೆ ಪರಿಚಯಸ್ಥನೇ ಆಗಿರುವ ವ್ಯಕ್ತಿಯೊಬ್ಬ ಮಗುವನ್ನು ಅಪಹರಣ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.
ಬಲೂನು ಮಾರುವವರಾಗಿದ್ದ ಪೋಷಕರಿಗೆ ರಾಜವಾಡ ಕೋಟೆ ಬಳಿಯ ಬೀದಿಯೇ ಅರಮನೆಯಾಗಿತ್ತು. ಅಲ್ಲಿಯೇ ಅವರು ವಾಸ ಮಾಡುತ್ತಿದ್ದರು. ರಾಜ್ವಾಡ ಕೋಟೆ ಬಳಿ ಮಲಗಿದ್ದ ಪೋಷಕರ ಸಮೀಪವೇ ಇದ್ದ ಕಾಮುಕ ಬೆಳಿಗ್ಗೆ 5.30ರ ಸುಮಾರಿಗೆ ತಾಯಿಯ ಮಡಿಲಿನಿಂದ ಮಗುವನ್ನು ಅಪಹರಿಸಿದ್ದಾರನೆ. ನಂತರ ಸೈಕಲ್ ನಲ್ಲಿ 50 ಮೀಟರ್ ದೂರದಲ್ಲಿರುವ ಕಟ್ಟಡಕ್ಕೆ ಕರೆ ತಂದಿದ್ದಾನೆ.
ನಂತರ ಮಗುವಿನ ಮೇಲೆ ಅತ್ಯಾಚಾರವೆಸಗಿ ಮಗುವಿನ ತಲೆಯನ್ನು ಬಡಿದು ಸಾಯಿಸಿದ್ದಾರೆ. ಮಗುವಿನ ಜನನಾಂಗದ ಮೇಲೆ ಗಾಯಗಳಾಗಿರುವುದಾಗಿ ವರದಿಗಳು ತಿಳಿಸಿವೆ.
ತಲೆಗೆ ತೀವ್ರವಾಗಿ ಪೆಟ್ಟಾಗಿದ್ದರಿಂದಾಗಿ ಮಗು ಸಾವನ್ನಪ್ಪಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ನಡುವೆ ಅತಿರೇಕದ ಅತ್ಯಾಚಾರ ಪ್ರಕರಣದ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಆಘಾತ ವ್ಯಕ್ತಪಡಿಸಿದ್ದಾರೆ.
आज मन बहुत व्यथित है, इंदौर की घटना ने आत्मा को झकझोर दिया है। इतनी छोटी बच्ची के साथ ऐसा घिनौना कृत्य। समाज को अपने अंदर झांकने की ज़रूरत है। प्रशासन ने त्वरित कार्रवाई करते हुए आरोपी को गिरफ़्तार किया है। हम सुनिश्चित करेंगे कि उसे जल्द से जल्द कड़ी से कड़ी सज़ा मिले।