ನವದೆಹಲಿ: ಅತ್ಯಾಚಾರದಂತಹ ಘಟನೆಗಳು ದುರಾದೃಷ್ಟಕರ, ಕೆಲವೊಮ್ಮೆ ನಮಗೆ ಅವುಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಅವರು ಭಾನುವಾರ ಹೇಳಿದ್ದಾರೆ.
ಕತುವಾ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಅತ್ಯಾಚಾರ ಘಟನೆಗಳು ದುರಾದೃಷ್ಟಕರ, ಕೆಲವೊಮ್ಮೆ ಅವುಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ,
ಬಳಿಕ ಅತ್ಯಾಚಾರಿಗಳ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕಠಿಣ ನಿರ್ಧಾರ ಕುರಿತಂತೆ ಮಾತನಾಡಿರುವ ಅವರು, ಸರ್ಕಾರ ಎಲ್ಲೆಡೆ ಎಚ್ಚರವಾಗಿದೆ. ತನಿಖೆಗಳೂ ನಡೆಯುತ್ತಿವೆ. ಭಾರತದಂತಹ ದೊಡ್ಡ ದೇಶದಲ್ಲಿ ಅತ್ಯಾಚಾರದ ಒಂದೆರಡು ಘಟನೆಗಳನ್ನು ಪ್ರಚಾರ ಮಾಡಬಾರದು ಎಂದು ತಿಳಿಸಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರದಂತಹ ಘಟನೆಗಳ ಕುರಿತು ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿರುವ ನಡುವಲ್ಲೇ ಕೇಂದ್ರ ಸಚಿವರು ನೀಡಿರುವ ಹೇಳಿಗೆ ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.