ಚಾಲಕ ಮುಸ್ಲಿಂ ಎಂಬ ಕಾರಣಕ್ಕೆ ಓಲಾ ಕ್ಯಾಬ್ ರದ್ದು ಮಾಡಿದ ವ್ಯಕ್ತಿ: ಟ್ವಿಟರ್ ನಲ್ಲಿ ವ್ಯಾಪಕ ಚರ್ಚೆ

ಚಾಲಕ ಮುಸ್ಲಿಂ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಓಲಾ ಕ್ಯಾಬ್ ರದ್ದು ಮಾಡಿದ್ದು, ಕ್ಯಾಬ್ ರದ್ದು ಮಾಡಿರುವ ಕುರಿತಂತೆ ವ್ಯಕ್ತಿ ಬರೆದುಕೊಂಡಿರುವ ಸಂದೇಶವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪರ ಚರ್ಚೆಗೆ ಗ್ರಾಸವಾಗಿದೆ...
ಅಭಿಷೇಕ್ ಮಿಶ್ರಾ
ಅಭಿಷೇಕ್ ಮಿಶ್ರಾ
ನವದೆಹಲಿ: ಚಾಲಕ ಮುಸ್ಲಿಂ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಓಲಾ ಕ್ಯಾಬ್ ರದ್ದು ಮಾಡಿದ್ದು, ಕ್ಯಾಬ್ ರದ್ದು ಮಾಡಿರುವ ಕುರಿತಂತೆ ವ್ಯಕ್ತಿ ಬರೆದುಕೊಂಡಿರುವ ಸಂದೇಶವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪರ ಚರ್ಚೆಗೆ ಗ್ರಾಸವಾಗಿದೆ. 
ಅಭಿಷೇಕ್ ಮಿಶ್ರಾ ಎಂಬ ವ್ಯಕ್ತಿ ಬುಕಿಂಗ್'ನ್ನು ರದ್ದು ಮಾಡಿದ ವ್ಯಕ್ತಿಯೆಂದು ಹೇಳಲಾಗುತ್ತಿದೆ. ಏ.20 ರಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಅಭಿಷೇಕ್, ಚಾಲಕ ಮುಸ್ಲಿಂ ಆಗಿದ್ದರಿಂದಾಗಿ ಓಲಾ ಕ್ಯಾಬ್ ಬುಕಿಂಗ್ ರದ್ದು ಮಾಡಿದೆ. ನನ್ನ ಹಣವನ್ನು ಜಿಹಾದಿಗಳಿಗೆ ಕೊಡಲು ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದ. ಅಲ್ಲದೆ, ಟ್ವೀಟ್ ಜೊತೆಗೆ ಕ್ಯಾಬ್ ಬುಕಿಂಗ್ ರದ್ದುಪಡಿಸಿದ್ದನ್ನು ಸ್ಕ್ರೀನ್ ಶಾಟ್ ತೆಗೆದು ಪ್ರಕಟಿಸಿದ್ದ. ಅದರಲ್ಲಿ ಚಾಲಕನ ಹೆಸರಿರುವುದು ಕಂಡು ಬಂದಿದೆ. 
ಅಭಿಷೇಕ್ ಕೇಂದ್ರ ಸಚಿವಾದ ನಿರ್ಮಲಾ ಸೀತಾರಾಮನ್, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಸಂಸ್ಕೃತಿ ಸಚಿವಚ ಮಹೇಶ್ ಶರ್ಮಾ ಅವರನ್ನು ಫಾಲೋ ಮಾಡುತ್ತಿರುವುದು ಕಂಡು ಬಂದಿದೆ. 
ಅಭಿಷೇಕ್ ಅವರ ಈ ಟ್ವೀಟ್'ಗೆ ಹಲವರು ವಿರೋಧಗಳನ್ನು ವ್ಯಕ್ತಪಡಿಸುತ್ತಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಕೂಗುಗಳು ಕೇಳಿ ಬರತೊಡಗಿವೆ. 
ಈ ನಡುವೆ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಅಭಿಷೇಕ್, ಮಹಿಳೆಯೊಬ್ಬರು ಮಾಡಿರುವ ಫೇಸ್ ಬುಕ್ ಪೋಸ್ಟ್'ನ ಸ್ಕ್ರೀಟ್ ಶಾಟ್ ಪ್ರಕಟಿಸಿ, ಓಲಾ ಕ್ಯಾಬ್ ಗಳ ಹಿಂದಿರುವ ಹನುಮಾನ್ ಚಿತ್ರಗಳನ್ನು ತೆಗೆಸಬೇಕೆಂದು ಹೇಳಿಕೊಡಿದ್ದಾರೆ. ಇದನ್ನು ಒಪ್ಪಬಹುದಾದರೆ, ನನ್ನ ಕ್ರಮವನ್ನೇಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com