ಜಾತಿ ನಿಂದನೆ:ಸಲ್ಮಾನ್ ಖಾನ್ ವಿರುದ್ಧ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ
ದೇಶ
ಜಾತಿ ನಿಂದನೆ:ಸಲ್ಮಾನ್ ಖಾನ್ ವಿರುದ್ಧ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ
ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ವಿರುದ್ಧ ಎಸ್.ಸಿ. / ಎಸ್.ಟಿ. ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣ ಸಂಬಂಧ ಇಂದು ಸರ್ವೋಚ್ಚ ನ್ಯಾಯಾಲಯವು ನಟನಿಗೆ ಬಿಗ್ ರಿಲೀಫ್ ನಿಡಿದೆ.
ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ವಿರುದ್ಧ ಎಸ್.ಸಿ. / ಎಸ್.ಟಿ. ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣ ಸಂಬಂಧ ಇಂದು ಸರ್ವೋಚ್ಚ ನ್ಯಾಯಾಲಯವು ನಟನಿಗೆ ಬಿಗ್ ರಿಲೀಫ್ ನಿಡಿದೆ.
ಸಲ್ಮಾನ್ ವಿರುದ್ಧ ಒಂದು ಸಮುದಾಯಕ್ಕೆ ವಿರುದ್ಧವಾಗಿ ಅವಹೇಳನಕಾರಿ ಟೀಕೆ ಮಾಡಿದ್ದ ಆರೋಪದಡಿ ಎಸ್ಸಿ / ಎಸ್ಟಿ ಕಾಯ್ದೆ ಅಡಿಯಲ್ಲಿ ದೇಶದಾದ್ಯಂತೆ ವಿವಿಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಸಲ್ಮಾನ್ ಖಾನ್ ವಿರುದ್ಧದೇಶಾದ್ಯಂತ ದಾಖಲಾದ ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯ ಇಂದು ತಡೆ ನೀಡಿದೆ.
ಮುಖ್ಯ ನ್ಯ್ತಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪಿಥ ಕಳೆದೊಂದು ವರ್ಷದಿಂದ ನಟನ ವಿರುದ್ಧ ದಾಖಲಾಗಿದ್ದ ದೂರುಗಳು ಮತ್ತು ಎಫ್ಐಆರ್ಗಳನ್ನು ಪ್ರಶ್ನಿಸಿ ಸಲ್ಮಾನ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಾಲಯ ದೂರು ದಾಖಲಾದ ರಾಜ್ಯಗಳಿಗೆ ನೋಟೀಸ್ ಜಾರಿ ಮಾಡಿದೆ.
ಪ್ರಕರಣದ ಮುಂದಿನ ವಿಚಾರಣೆ ಜುಲೈ 23ಕ್ಕೆ ನಿಗದಿಯಾಗಿದ್ದು ಅಷ್ಟರಲ್ಲಿ ಆಯಾ ರಾಜ್ಯಗಳು ನೋಟೀಸ್ ಗೆ ಉತ್ತರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.
ಸಲ್ಮಾನ್ ತಮ್ಮ "ಟೈಗರ್ ಝಿಂಡಾ ಹೈ" ಚಿತ್ರದ ಪ್ರಚಾರದ ವೇಳೆ ಟಿವಿ ಕಾರ್ಯಕ್ರಮವೊಂದರಲ್ಲಿ ವಾಲ್ಮೀಕಿ ಸಮುದಾಯವನ್ನು ಅವಹೇಳನಕರವಾಗಿ ಟೀಕಿಸಿದ್ದರು. ಇದರ ಸಂಬಂಧ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ