ನಾನು ಹಿಂದು, ಕ್ರೈಸ್ತಳಲ್ಲ; ಆಂಧ್ರ ಸಿಎಂಗೆ ಪತ್ರ ಬರೆದ ಟಿಡಿಪಿ ಶಾಸಕಿಯಿಂದ ಸ್ಪಷ್ಟನೆ

ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ)ಯ ಸದಸ್ಯೆಯನ್ನಾಗಿ ತಮ್ಮನ್ನು ಆಯ್ಕೆ ಮಾಡಿರುವುದು ವಿವಾದಕ್ಕೆ ಎಡೆಮಾಡಿ ಕೊಟ್ಟಿರುವ ಹಿನ್ನಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿರುವ ತೆಲುಗು ದೇಶಂ ಪಕ್ಷದ ಶಾಸಕಿ ವಂಗಲಪುಡಿ ಅನಿತಾ ಅವರು...
ನಾನು ಹಿಂದು, ಕ್ರೈಸ್ತಳಲ್ಲ; ಆಂಧ್ರ ಸಿಎಂಗೆ ಪತ್ರ ಬರೆದು ಸ್ಪಷ್ಟನೆ ನೀಡಿದ ಟಿಡಿಪಿ ಶಾಸಕಿ
ನಾನು ಹಿಂದು, ಕ್ರೈಸ್ತಳಲ್ಲ; ಆಂಧ್ರ ಸಿಎಂಗೆ ಪತ್ರ ಬರೆದು ಸ್ಪಷ್ಟನೆ ನೀಡಿದ ಟಿಡಿಪಿ ಶಾಸಕಿ
ಅಮರಾವತಿ; ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ)ಯ ಸದಸ್ಯೆಯನ್ನಾಗಿ ತಮ್ಮನ್ನು ಆಯ್ಕೆ ಮಾಡಿರುವುದು ವಿವಾದಕ್ಕೆ ಎಡೆಮಾಡಿ ಕೊಟ್ಟಿರುವ ಹಿನ್ನಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿರುವ ತೆಲುಗು ದೇಶಂ ಪಕ್ಷದ ಶಾಸಕಿ ವಂಗಲಪುಡಿ ಅನಿತಾ ಅವರು, ನಾನು ಹಿಂದು, ಕ್ರೈಸ್ತಳಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ. 
ತೆಲುಗು ದೇಶಂ ಪಕ್ಷದ ಕ್ರೈಸ್ತ ಶಾಸಕಿ ವಂಗಲಪುಡಿ ಅನಿತಾ ಅವರನ್ನು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ)ಯ ಸದಸ್ಯೆಯನ್ನಾಗಿ ಮಾಡಿರುವುದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು. 
ಹೀಗಾಗಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿರುವ ಅನಿತಾ ಅವರು, ನಾನು ಹಿಂದು, ಕ್ರೈಸ್ತಳಲ್ಲ. ನನ್ನಿಂದ ಸರ್ಕಾರಕ್ಕೆ ಹಾಗೂ ನಿಮಗೆ ಇರುಸು ಮುರುಸು ಉಂಟು ಮಾಡಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. 
ಟಿಟಿಡಿ ಸದಸ್ಯೆಯನ್ನಾಗಿ ನೇಮಕ ಮಾಡಿರುವುದನ್ನು ಅನುಸರಿಸಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಅತ್ಯಂತ ಅಹಿತಕರ ಹಾಗೂ ಜಿಗುಪ್ಸೆಯ ವಿವಾದವನ್ನಾಗಿ ಮಾಡಿರುವುದಕ್ಕೆ ನನಗೆ ಬಹಳ ನೋವಾಗಿದೆ. ನಾನೋರ್ವ ಹಿಂದು ಮತ್ತು ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದೇನೆಂದು ಹೇಳಲು ಇಚ್ಛಿಸುತ್ತೇನೆ. ನನ್ನ ಈ ನೇಮಕಾತಿಯಿಂದ ಸರ್ಕಾರಕ್ಕೆ ಮುಜುಗರಕ್ಕೊಳಗಾಗುವುದು ನನಗೆ ಇಷ್ಟವಿಲ್ಲ. ಹೀಗಾಗಿ ಟಿಟಿಡಿ ಮಂಡಳಿಯಲ್ಲಿನ ನನ್ನ ಸದಸ್ಯತ್ವವನ್ನು ಹಿಂಪಡೆದುಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇನೆಂದು ಪತ್ರದಲ್ಲಿ ಬರೆದಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com