ಧರ್ಮ, ಜಾತಿ ಆಧಾರದ ಮೇಲೆ ತಾರತಮ್ಯ ಇಲ್ಲ; ಮುಸ್ಲಿಂ ಚಾಲಕನೆಂದು ಬುಕಿಂಗ್ ರದ್ದು ಮಾಡಿದ್ದ ವ್ಯಕ್ತಿಗೆ ಓಲಾ

ಜಾತಿ, ಧರ್ಮ ಹಾಗೂ ಲಿಂಗದ ಆಧಾರ ಮೇಲೆ ತಾರತಮ್ಯ ಮಾಡುವುದಿಲ್ಲ. ಓಲಾ ಜಾತ್ಯಾತೀತ ವೇದಿಕೆಯೆಂದು ಓಲಾ ಕಂಪನಿ ಸೋಮವಾರ ಹೇಳಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ; ಜಾತಿ, ಧರ್ಮ ಹಾಗೂ ಲಿಂಗದ ಆಧಾರ ಮೇಲೆ ತಾರತಮ್ಯ ಮಾಡುವುದಿಲ್ಲ. ಓಲಾ ಜಾತ್ಯಾತೀತ ವೇದಿಕೆಯೆಂದು ಓಲಾ ಕಂಪನಿ ಸೋಮವಾರ ಹೇಳಿದೆ. 
ವ್ಯಕ್ತಿಯೊಬ್ಬ ಮುಸ್ಲಿಂ ಚಾಲಕನೆಂಬ ಕಾರಣಕ್ಕೆ ಕ್ಯಾಬ್ ಬುಕಿಂಗ್ ರದ್ದು ಮಾಡಿದ್ದ ಹಿನ್ನಲೆಯಲ್ಲಿ ವ್ಯಾಪಕ ಚರ್ಚೆ ಗ್ರಾಸವಾಗಿರುವ ಹಿನ್ನಲೆಯಲ್ಲಿ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಓಲಾ ಕಂಪನಿಯು, ನಮ್ಮ ದೇಶದಲ್ಲಿ ಓಲಾ ಜಾತ್ಯಾತೀತ ವೇದಿಕೆಯಾಗಿದೆ. ನಮ್ಮ ಪಾಲುದಾರರಾದ ಚಾಲಕು ಹಾಗೂ ಪ್ರಯಾಣಿಕರನ್ನು ಜಾತಿ, ಧರ್ಮ ಹಾಗೂ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಎಲ್ಲಾ ಸಂದರ್ಭದಲ್ಲಿಯೂ ಹಾಗೂ ಎಲ್ಲರನ್ನು ಗೌರವದಿಂದ ನೋಡುವಂತೆ ಗ್ರಾಹಕರು ಹಾಗೂ ಚಾಲಕರಿಗೆ ಆಗ್ರಹಿಸುತ್ತೇವೆಂದು ಹೇಳಿದೆ. 
ಚಾಲಕ ಮುಸ್ಲಿಂ ಎಂಬ ಕಾರಣಕ್ಕೆ ಅಭಿಷೇಕ್ ಮಿಶ್ರಾ ಎಂಬುವವರು ಓಲಾ ಕ್ಯಾಬ್ ರದ್ದು ಮಾಡಿದ್ದರು. ಅಲ್ಲದೆ, ಕ್ಯಾಬ್ ರದ್ದು ಮಾಡಿದ್ದರ ಕುರಿತಂತೆ ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು. 
ಏ.20 ರಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಅಭಿಷೇಕ್, ಚಾಲಕ ಮುಸ್ಲಿಂ ಆಗಿದ್ದರಿಂದಾಗಿ ಓಲಾ ಕ್ಯಾಬ್ ಬುಕಿಂಗ್ ರದ್ದು ಮಾಡಿದೆ. ನನ್ನ ಹಣವನ್ನು ಜಿಹಾದಿಗಳಿಗೆ ಕೊಡಲು ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದರು. ಅಲ್ಲದೆ, ಟ್ವೀಟ್ ಜೊತೆಗೆ ಕ್ಯಾಬ್ ಬುಕಿಂಗ್ ರದ್ದುಪಡಿಸಿದ್ದನ್ನು ಸ್ಕ್ರೀನ್ ಶಾಟ್ ತೆಗೆದು ಪ್ರಕಟಿಸಿದ್ದರು. ಇದು ಟ್ವಿಟರ್ ನಲ್ಲಿ ವ್ಯಾಪಕ ವಿರೋಧ ಹಾಗೂ ಚರ್ಚೆಗೆ ಗ್ರಾಸವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com