ಗುರುವಾಯೂರು ಪ್ರಸಾದ ನಿಲಯಕ್ಕೆ ಹಿಂದೂಯೇತರರಿಗೆ ಪ್ರವೇಶ ತಡೆ ಹಿಡಿದ ದೇವಸ್ಥಾನ ಮಂಡಳಿ

ಇತ್ತೀಚಿಗೆ ಗುರುವಾಯೂರು ಶ್ರೀಕೃಷ್ಣ ದೇವಾಲಯದ ಪ್ರಸಾದ ನಿಲಯ ಪ್ರವೇಶಕ್ಕೆ ಹಿಂದೂಯೇತರರಿಗೂ ಅವಕಾಶ....
ಗುರುವಾಯೂರು ದೇವಸ್ಥಾನ
ಗುರುವಾಯೂರು ದೇವಸ್ಥಾನ
ತ್ರಿಶೂರ್(ಕೇರಳ): ಇತ್ತೀಚಿಗೆ ಗುರುವಾಯೂರು ಶ್ರೀಕೃಷ್ಣ  ದೇವಾಲಯದ ಪ್ರಸಾದ ನಿಲಯ ಪ್ರವೇಶಕ್ಕೆ ಹಿಂದೂಯೇತರರಿಗೂ ಅವಕಾಶ ನೀಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳವಾರ ಅನುಮತಿ ನಿರ್ಧಾರವನ್ನು ತಡೆ ಹಿಡಿಯಲಾಗಿದೆ.
ಕೇರಳದ ಗುರುವಾಯೂರು ಕೃಷ್ಣ ದೇಗುಲದಲ್ಲಿ ಹಿಂದೂಯೇತರರಿಗೆ ಪ್ರಸಾದ ಭೋಜನಕ್ಕೆ ಅವಕಾಶವಿರಲಿಲ್ಲ. ಈ ಸಂಬಂಧ ಕಳೆದ ವಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದ ದೇಗುಲದ ಆಡಳಿತ ಮಂಡಳಿ, ಪ್ರಸಾದಕ್ಕೆ ಎಲ್ಲ ಧರ್ಮದವರಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಘೋಷಿಸಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದೇಗುಲದ ಆಡಳಿತ ಮಂಡಳಿ ಇಂದು ಸಭೆ ಸೇರಿ ಅನುಮತಿ ತಡೆಹಿಡಿಯುವ ನಿರ್ಧಾರ ಕೈಗೊಂಡಿದೆ.
ಪ್ರಧಾನ ಅರ್ಚಕರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಸಾದ ನಿಲಯಕ್ಕೆ ಹಿಂದೂಯೇತರರಿಗೆ ಪ್ರವೇಶ ನೀಡುವ ನಿರ್ಧಾರ ತಡೆ ಹಿಡಿಯಲಾಗಿದೆ. ಈ ಸಂಬಂಧ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲಿಯವರಿಗೆ ಹಿಂದೂಯೇತರರಿಗೆ ಅವಕಾಶವಿಲ್ಲ ಎಂದು ದೇವಸ್ಥಾನ ಮಂಡಳಿ ಅಧ್ಯಕ್ಷ ಕೆಬಿ ಮೋಹಂದಾಸ್ ಅವರು ಹೇಳಿದ್ದಾರೆ. ಅಲ್ಲದೆ ದೇಗುಲದ ಊಟದ ಕೋಣೆಗೆ ಆಗಮಿಸುವವರಿಗೆ ಇದ್ದ ವಸ್ತ್ರಸಂಹಿತೆಯನ್ನೂ ಮುಂದುವರೆಸಲಾಗಿದ್ದು, ಭಕ್ತಾದಿಗಳು ಅಂಗಿ, ಪ್ಯಾಂಟ್‌ ಹಾಗೂ ಚಪ್ಪಲಿಯನ್ನೂ ಧರಿಸಿ ಊಟದ ಕೋಣೆಗೆ ಬರವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com