ಬ್ಯಾಂಕ್ ಗೆ ವಂಚನೆ: ವಡೋದರಾ ಮೂಲದ ಡಿಪಿಐಎಲ್ ನ 1,122 ಕೋಟಿ ರೂ. ಮೌಲ್ಯದ ಆಸ್ತಿ ಇ.ಡಿ ವಶಕ್ಕೆ

ಬ್ಯಾಂಕ್ ಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ವಡೋದರಾ ಮೂಲದ ಡೈಮಂಡ್ ಪವರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಡಿಪಿಐಎಲ್) ಸಮೂಹ ಸಂಸ್ಥೆಗಳಿಗೆ ಸಂಬಂಧಿಸಿದ 1,122 ಕೋಟಿ ರೂಪಾಯಿ ಮೌಲ್ಯದ
ಬ್ಯಾಂಕ್ ಗೆ ವಂಚನೆ: ವಡೋದರಾ ಮೂಲದ ಡಿಪಿಐಎಲ್ ನ 1,122 ಕೋಟಿ ರೂ ಮೌಲ್ಯದ ಆಸ್ತಿ ಇಡಿ ವಶಕ್ಕೆ
ಬ್ಯಾಂಕ್ ಗೆ ವಂಚನೆ: ವಡೋದರಾ ಮೂಲದ ಡಿಪಿಐಎಲ್ ನ 1,122 ಕೋಟಿ ರೂ ಮೌಲ್ಯದ ಆಸ್ತಿ ಇಡಿ ವಶಕ್ಕೆ
ನವದೆಹಲಿ: ಬ್ಯಾಂಕ್ ಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ವಡೋದರಾ ಮೂಲದ ಡೈಮಂಡ್ ಪವರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಡಿಪಿಐಎಲ್) ಸಮೂಹ ಸಂಸ್ಥೆಗಳಿಗೆ ಸಂಬಂಧಿಸಿದ 1,122 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಶಕ್ಕೆ ಪಡೆದಿದೆ.
 
ಡಿಪಿಐಎಲ್ ವಿರುದ್ಧ ಬ್ಯಾಂಕ್ ಗಳಿಗೆ 2,654 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪವಿದ್ದು, ಸಿಬಿಐ ಎಫ್ಐ ಆರ್ ನ್ನು ಆಧಾರವಾಗಿಟ್ಟುಕೊಂಡು ಜಾರಿ ನಿರ್ದೇಶನಾಲಯ ಅಕ್ರಮ ಹಣಾ ವರ್ಗಾವಣೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಅಷ್ಟೇ ಅಲ್ಲದೇ ಕಳೆದ ತಿಂಗಳು ಸಂಸ್ಥೆಗೆ ಸೇರಿದ ಪ್ರದೇಶಗಳಲ್ಲಿ ಶೋಧಕಾರ್ಯಾಚರಣೆಯನ್ನೂ ನಡೆಸಿತ್ತು. 

ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವ ಆಸ್ತಿಗಳ ಪೈಕಿ ಡಿಪಿಐಎಲ್ ನ ಸಹ ಸಂಸ್ಥೆಗಳಾದ ಡೈಮಂಡ್ ಪವರ್ ಟ್ರಾನ್ಸ್ಫಾರ್ಮರ್ ಲಿಮಿಟೆಡ್, ಡೈಮಂಡ್ ಪ್ರಾಜೆಕ್ಟ್ಸ್ ಲಿಮಿಟೆಡ್, ಮೈಫೇಸ್ ಲೀಸರ್ಸ್ ಹಾಗೂ ನಾರ್ಥ್ ವೇ ಸ್ಪೇಸಸ್ ಸಂಸ್ಥೆಗಳಿಗೆ ಸೇರಿದ ಆಸ್ತಿ ಹಾಗೂ ವಿಂಡ್ ಮಿಲ್, ನಿರ್ಮಾಣ ಹಂತದಲ್ಲಿದ್ದ ಹೋಟೆಲ್ ಸಹ ಸೇರಿದೆ.
 
" ಡಿಪಿಐಎಲ್ ಗೆ ಸೇರಿದ ಘಟಕ, ಭುಜ್ ನಲ್ಲಿರುವ ಮೂರು ವಿಂಡ್ ಮಿಲ್, ಸಂಸ್ಥೆಯ ಪ್ರಮೋಟರ್ ಗಳಾದ ಭಟ್ನಾಗರ್ ಕುಟುಂಬದ ಫ್ಲಾಟ್ ಗಳು, ಇನ್ನೂ ಮಾರಾಟವಾಗಬೇಕಿದ್ದ ಫ್ಲಾಟ್, ನಿರ್ಮಾಣ ಹಂತದಲ್ಲಿದ್ದ ಹೋಟೆಲ್ ಗಳು ಹಾಗೂ ಡಿಪಿಐಎಲ್ ಗೆ ಸೇರಿದ ಭೂಮಿಯನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
 
ಡಿಪಿಐಎಲ್ ತನಗೆ ಸಂಬಂಧಿಸಿದ ಸಂಸ್ಥೆಗಳ ಮೂಲಕ ಅಕ್ರಮವಾಗಿ ಲೆಟರ್ ಆಫ್ ಕ್ರೆಡಿಟ್ ಪಡೆದು ಬ್ಯಾಂಕ್ ಗಳಿಗೆ ಸುಮಾರು 2,654 ಕೋಟಿ ರೂಪಾಯಿ ವಂಚನೆ ಮಾಡಿತ್ತು. ಅಷ್ಟೆ ಅಲ್ಲದೇ ಈ ರೀತಿ ಬ್ಯಾಂಕ್ ಗಳಿಂದ ಪಡೆದ ಹಣವನ್ನು ನಾರ್ಥ್ ವೇ ಸ್ಪೇಸಸ್ ಹಾಗೂ ಮೈಫೇರ್ ಲೀಸರ್ಸ್ ರೀತಿಯ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ತೊಡಗಿಸಿತ್ತು.  ಸಂಸ್ಥೆಯ ವಹಿವಾಟಿನಲ್ಲೂ ಪಾರದರ್ಶಕತೆ ಇರಲಿಲ್ಲ. ಡೈಮಂಡ್ ಗ್ರೂಪ್ ಆಫ್ ಸಂಸ್ಥೆಗಳ ವಹಿವಾಟುಗಳೂ ನಕಲಿಯಾಗಿದ್ದವು ಇವುಗಳ ಪರಿಣಾಮವಾಗಿ ಸಂಸ್ಥೆ ಬ್ಯಾಂಕ್ ಗಳಿಗೆ 2654.40 ರೂಗಳ ಸುಸ್ತಿದಾರನಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com