ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದಲಿತರ ಮನೆಗೆ ಭೇಟಿ ನೀಡಿರುವುದು ಕೇವಲ ಚುನಾವಣೆಯ ಗಿಮಿಕ್ಎಂ ದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ದಲಿತರ ಮನೆಗೆ ಊಟಕ್ಕೆಂದು ಬಿಜೆಪಿ ಸಚಿವರು ಹೋಗುತ್ತಾರೆ. ಆದರೆ ಹೊಟೇಲ್ ಊಟ ತೆಗೆದುಕೊಂಡು ದಲಿತರ ಮನೆಗೆ ಹೋಗುತ್ತಾರೆ. ವಾಸ್ತವದಲ್ಲಿ ದಲಿತರ ನೆರಳನ್ನು ಕಂಡರೂ ಬಿಜೆಪಿಗೆ ಆಗುವುದಿಲ್ಲ ಎಂದು ಮಾಯಾವತಿ ಕಿಡಿಕಾರಿದ್ದಾರೆ.
ಬಿಜೆಪಿ ದಲಿತರು, ಹಿಂದುಳಿದವರನ್ನು ಆರೈಕೆ ಮಾಡುವುದಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಅವರಿಗೆ ದಲಿತರ ನೆನಪಾಗುತ್ತದೆ. ದಲಿತರ ಮನೆಗೆ ಹೋಗಿ ಫೋಟೋ ತೆಗೆಸಿಕೊಂಡು ಬಿಜೆಪಿಗರು ನಾಟಕವಾಡುತ್ತಾರೆ. ಜನ ಬುದ್ಧಿವಂತರಾಗಿದ್ದಾರೆ. ಅವರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಮಾಯಾವತಿ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ನಿನ್ನೆ ಪ್ರತಾಪಗಢ್ ಜಿಲ್ಲೆಯ ಕಂಡಿಪುರ ಮಾಧಾಪುರ್ ಗ್ರಾಮದ ದಲಿತರೊಬ್ಬರು ಮನೆಗೆ ಭೇಟಿ ನೀಡಿ, ಅವರೊಂದಿಗೆ ಊಟ ಮಾಡಿದ್ದರು.