ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಸ್ಪಷ್ಟ ಪಾತ್ರವಿಲ್ಲ. ಆದರೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇಮಕಾತಿಗೆ ಬಂದಿರುವ ಶಿಫಾರಸ್ಸುಗಳನ್ನು ತಡೆಹಿಡಿಯುವ ಅಧಿಕಾರ ಹೊಂದಿದೆ. ನಿಯಮಗಳ ಪ್ರಕಾರ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು ಟಾಪ್-4 ನ್ಯಾಯಾಧೀಶರೊಂದಿಗೆ ಸಮಾಲೋಚನೆ ನಡೆಸಿ ಹೈಕೋರ್ಟ್ ನಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸ್ಥಾನಕ್ಕೆ ಬಡ್ತಿ ನೀಡಬೇಕಿರುವ ನ್ಯಾಯಾಧೀಶರ ಪಟ್ಟಿಯನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ಕಳಿಸುತ್ತಾರೆ. ಸಿಜೆಐ, ಕೇಂದ್ರ ಕಾನೂನು ಸಚಿವರು ಅಂತಿಮಗೊಳಿಸಿದ ಶಿಫಾರಸ್ಸನ್ನು ಪ್ರಧಾನಿಗಳಿಗೆ ಕಳಿಸಲಾಗುತ್ತದೆ. ನಂತರ ಪ್ರಧಾನಿ ಅದನ್ನು ಪರಿಶೀಲಿಸಿ ರಾಷ್ಟ್ರಪತಿಗಳಿಗೆ ಕಳಿಸುತ್ತಾರೆ.