ಐಪಿಸಿ ಸೆಕ್ಷನ್ 377 ರ ವಿರುದ್ಧ ಸುಪ್ರೀಂಕೋರ್ಟ್ ಗೆ ಮತ್ತೊಂದು ಅರ್ಜಿ ಸಲ್ಲಿಕೆ

ಸಲ್ಲಿಂಗ ಕಾಮವನ್ನು ಅಪರಾಧಗೊಳಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ : ಸಲ್ಲಿಂಗ ಕಾಮವನ್ನು ಅಪರಾಧಗೊಳಿಸುವ   ಭಾರತೀಯ  ದಂಡ ಸಂಹಿತೆಯ ಸೆಕ್ಷನ್ 377 ರ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಹೋಟೆಲ್ ಉದ್ಯಮಿ ಕೇಶವ್ ಸೂರಿ ಅರ್ಜಿ ಸಲ್ಲಿಸಿದ ಆರು ದಿನಗಳ ನಂತರ, ಅರಿಪ್ ಜಾಫರ್ ಮತ್ತು ಅಶೋಕ್ ರಾವ್ ಕವಿ ಎಂಬವರು ಸುಪ್ರೀಂಕೋರ್ಟ್ ಗೆ  ಇಂದು  ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.

ಈ ಎಲ್ಲರ  ಅರ್ಜಿ ವಿಚಾರಣೆಯನ್ನು ಮೇ 1 ರಂದು ನಡೆಸಲು ವಿಭಾಗೀಯ ಪೀಠ ಸಮ್ಮತಿ ನೀಡಿದೆ.

ಸೆಕ್ಷನ್ 377 ರದ್ದುಗೊಳಿಸುವ ಸಂಬಂಧ ಸೂರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್  ಕೇಂದ್ರಸರ್ಕಾರದ ಪ್ರತಿಕ್ರಿಯೆಯನ್ನು ಬಯಸಿತ್ತು.

 ಇದಕ್ಕೂ ಮುನ್ನ 2009ರಲ್ಲಿ ದೆಹಲಿ ಹೈಕೋರ್ಟ್ ಸೆಕ್ಷನ್ 377ನ್ನು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ನಂತರ ಈ ಆದೇಶವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಐಪಿಸಿ ಸೆಕ್ಷನ್ 377 ರ ಅನ್ವಯ  ಒಬ್ಬ ವ್ಯಕ್ತಿ ಆದೇ ರೀತಿಯ ಮತ್ತೊಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಸ್ವಾಭಾವಿಕ ವಾದಕ್ಕೆ ವಿರುದ್ಧವಾದದ್ದು, ಶಿಕ್ಷಾರ್ಹ ಅಪರಾಧವಾದದ್ದು ಎಂದು ತೀರ್ಪು ನೀಡಿತ್ತು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com