ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ 'ಇಂದು ಮಲ್ಹೋತ್ರಾ' ಪ್ರಮಾಣವಚನ ಸ್ವೀಕಾರ

ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಸುಪ್ರೀಂಕೋರ್ಟ್ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದು, ಸಾಕಷ್ಟು ಬೆಳವಣಿಗೆಗಳ ಬಳಿಕ ಇಂದು ಮಲ್ಹೋತ್ರಾ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ...
ಇಂದು ಮಲ್ಹೋತ್ರಾ
ಇಂದು ಮಲ್ಹೋತ್ರಾ
ನವದೆಹಲಿ; ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಸುಪ್ರೀಂಕೋರ್ಟ್ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದು, ಸಾಕಷ್ಟು ಬೆಳವಣಿಗೆಗಳ ಬಳಿಕ ಇಂದು ಮಲ್ಹೋತ್ರಾ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 
ಹಿರಿಯ ಮಹಿಳಾ ನ್ಯಾಯವಾದಿ ಇಂದು ಮಲ್ಹೋತ್ರಾ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ರಾಷ್ಟ್ರಪತಿಗಳು ಹೊರಡಿಸಿದ ಆದೇಶಕ್ಕೆ ತಡೆ ನೀಡಬೇಕು ಹಾಗೂ ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರ ನೇಮಕಾತಿಯನ್ನು ಒಪ್ಪಿಕೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬೇಕೆಂಬ ಅರ್ಜಿಯನ್ನು ನಿನ್ನೆಯಷ್ಟೇ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. 
ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆಯಷ್ಟೇ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಪೀಠ, ಇದೆಂತಹ ಅರ್ಜಿ? ಇದು ಅನೂಹ್ಯ, ಯೋಚನೆ ಮಾಡಲಾಗದ, ತಲೆಬುಡವಿಲ್ಲದ, ಅಷ್ಟೇಕೆ ಹಿಂದೆಂದೂ ಕೇಳರಿಯದ ರೀತಿಯ ಅರ್ಜಿ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. 
ಸುಪ್ರೀಂಕೋರ್ಟ್ನ ಕೊಲಿಜಿಯಂ ಇಂದು ಮಲ್ಹೋತ್ರಾ ಹಾಗೂ ಕೆ. ಎಂ.ಜೋಸೆಫ್ ಅವರನ್ನು ಸುಪ್ರೀಂಕೋರ್ಟ್'ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡಬೇಕೆಂದು ಕೇಂದ್ರ ಸರಕ್ರಾಕ್ಕೆ ಶಿಫಾರಸು ಮಾಡಿತ್ತು. ಅವುಗಳ ಬಗ್ಗೆ ವಿಳಬಂವಾಗಿ ಕ್ರಮ ಕೈಗೊಂಡ ಕೇಂದ್ರ ಸರ್ಕಾರ, ಕೆಲ ದಿನಗಳ ಹಿಂದಷ್ಟೇ ಇಂದು ಮಲ್ಹೋತ್ರಾ ನೇಮಕಕ್ಕೆ ಒಪ್ಪಿಗೆ ಸೂಚಿಸಿ, ಕೆ.ಎಂ.ಜೋಸೆಫ್ ಹೆಸರನ್ನು ಮರು ಪರಿಶೀಲನೆ ನಡೆಸುವಂತೆ ಸುಪ್ರೀಂಕೋರ್ಟ್'ಗೆ ವಾಪರ್ ಕಳುಹಿಸಿತ್ತು. 
ಸರ್ಕಾರ ಇಬ್ಬರ ಹೆಸರನ್ನೂ ಒಪ್ಪಿಕೊಳ್ಳಬೇಕಿತ್ತು ಇಲ್ಲವೇ ತಿರಸ್ಕರಿಸಬೇಕಿತ್ತು ಎಂದು ಇಂದಿ ಜೈಸಿಂಗ್ ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದರು. ಇದನ್ನು ತಳ್ಳಿಹಾಕಿದ ನ್ಯಾಯಪೀಠ, ನ್ಯಾಯಮೂರ್ತಿಗಳ ನೇಮಕದ ಶಿಫಾರಸನ್ನು ಮರುಪರಿಶೀನೆ ನಡೆಸುವಂದೆ ಹಿಂದಿರುಗಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ವಾಪಸ್ ಕಳಿಸಿದ್ದರೆ ನೋವು ನೋಡಿಕೊಳ್ಳುತ್ತೇವೆಂದು ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com