

ತ್ರಿಪುರಾ : ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಎಲ್ಲ 74 ಚಿಟ್ ಫಂಡ್ ಪ್ರಕರಣಗಳನ್ನು ವಿಶೇಷ ತನಿಖಾ ತಂಡದಿಂದ ಸಿಬಿಐಗೆ ವಹಿಸಲಾಗುವುದು ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಹೇಳಿದ್ದಾರೆ.
ರೋಸ್ ವ್ಯಾಲಿ, ರೆಸ್ ಪಾನ್ಸ್ ಸಮೂಹ, ಬಾಸಿಲ್ ಇಂಟರ್ ನ್ಯಾಷನಲ್, ಐ- ಕೋರ್ ಮತ್ತು ವಾರೀಸ್ ಸಂಮೂಹದ ಕಂಪನಿ ಸೇರಿದಂತೆ ಎಲ್ಲಾ 11 ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಬಿಐ ಒಪ್ಪಿಗೆ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದಿನ ಎಡಪಕ್ಷ ಸರ್ಕಾರ ಚಿಟ್ ಫಂಡ್ ಮೂಲಕ ಜನರನ್ನು ಶೋಷಣೆ ಮಾಡಿದೆ .ಯಾವುದೇ ಆಕ್ಷೇಪಣೆ ಇಲ್ಲದೆ ಪ್ರಮಾಣ ಪತ್ರ ಹಾಗೂ ಪರವಾನಗಿ ನೀಡಲಾಗಿದೆ ಎಂದು ಬಿಪ್ಲಾಬ್ ಕುಮಾರ್ ದೇಬ್ ಆರೋಪಿಸಿದ್ದಾರೆ.
2008ರಲ್ಲಿ ಅಮ್ಯೂಸ್ ಮೆಂಟ್ ಪಾರ್ಕಿನಲ್ಲಿರುವ ರೊಸ್ ವ್ಯಾಲಿ ಸಮೂಹಗ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಪಾಲ್ಗೊಂಡಿದ್ದಾರೆ. ತದನಂತರ ಆ ಕಂಪನಿ ಚಿಟ್ ಫಂಡ್ ಕಂಪನಿ ಎಂಬುದು ತಮ್ಮಗೆ ಗೊತ್ತಿರಲಿಲ್ಲ ಎಂದು ಹೇಳುತ್ತಾರೆ ಎಂದು ಸರ್ಕಾರ್ ಅವರನ್ನು ಟೀಕಿಸಿದ್ದಾರೆ.