ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೂನ್ 1ರಿಂದ ಕೃಷ್ಯುತ್ಪನ್ನ ಸರಬರಾಜು ಸ್ಥಗಿತ, ಜೂನ್ 10ಕ್ಕೆ ಭಾರತ್ ಬಂದ್: ಕಿಸಾನ್ ಮಹಾಸಂಘ'

ಜೂನ್ 1 ರಿಂದ 10 ದಿನಗಳವರೆಗೆ ದೇಶಾದ್ಯಂತ ನಗರಗಳಿಗೆ ತರಕಾರಿಗಳು, ಧಾನ್ಯಗಳು ಮತ್ತು ಹಾಲು ಸೇರಿದಂತೆ ಕೃಷಿ ಉತ್ಪನ್ನಗಳನ್ನು ಸರಬರಾಜು ಮಾಡಲಾಗುವುದಿಲ್ಲ ಎಂದು 110 ರೈತ ಸಂಘಟನೆಗಳ ....
Published on
ನವದೆಹಲಿ:  ಜೂನ್ 1 ರಿಂದ 10 ದಿನಗಳವರೆಗೆ ದೇಶಾದ್ಯಂತ ನಗರಗಳಿಗೆ ತರಕಾರಿಗಳು, ಧಾನ್ಯಗಳು ಮತ್ತು ಹಾಲು ಸೇರಿದಂತೆ ಕೃಷಿ ಉತ್ಪನ್ನಗಳನ್ನು ಸರಬರಾಜು ಮಾಡಲಾಗುವುದಿಲ್ಲ ಎಂದು 110 ರೈತ ಸಂಘಟನೆಗಳ ಮಹಾಮಂಡಲ ರಾಷ್ಟ್ರೀಯ ಕಿಸಾನ್ ಮಹಾಸಂಘ ತಿಳಿಸಿದೆ.
ಕೇಂದ್ರ ಸರ್ಕಾರದ ರೈತರ ವಿರೋಧಿ ನೀತಿಯನ್ನು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಜೂನ್ 10ರ ಮಧ್ಯಾಹ್ನ 2ರವರೆಗೆ ರಾಷ್ಟ್ರಾದ್ಯಂತ ಬಂದ್ ಆಚರಿಸಲಾಗುತ್ತದೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಯಶವಂತ್ ಸಿನ್ಹಾ ಒಳಗೊಂಡ ಮುಖಂಡರು  ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ಜೂನ್  1 ರಿಂದ ಜೂನ್ 10 ರವರೆಗೆ ತರಕಾರಿಗಳು, ಧಾನ್ಯಗಳು, ಹಾಲು-ಹೈನೋತ್ಪನ್ನಗಳು ಸೇರಿದಂತೆ ಯಾವ ಕೃಷಿ ಉತ್ಪನ್ನಗಳನ್ನು ಸಹ ಹಳ್ಳಿಗರು ಪಟ್ಟಣಗಳಿಗೆ ಸರಬರಾಜು ಮಾಡುವುದಿಲ್ಲ. ಜೂನ್ 6ರಂದು ರೈತರು ಅಸಹಕಾರ ದಿನ ಎಂದು ಆಚರಿಸಲಿದ್ದಾರೆ" ಸಿನ್ಹಾ ಹೇಳಿದರು.
ಸರ್ಕಾರ ಘೋಷಿಸಿರುವಂತೆ ಉತ್ಪಾದನೆಯ ವೆಚ್ಚಕ್ಕಿಂತ ಶೇ 50 ರಷ್ಟು ಹೆಚ್ಚಿನ ಪ್ರಮಾಣದ ಕನಿಷ್ಠ ಬೆಂಬಲ ಬೆಲೆಯು ರೈತರವರೆಗೆ ಇನ್ನೂ ತಲುಪಿಲ್ಲ, ರೈತ ಸಂಘಟನೆಗಳು ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚಕ್ಕೆ ಶೇ.50 ರಾಷ್ಟಿರಬೇಕು ಹಾಗೂ ರೈತರ ಸಂಪೂರ್ನ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದೆ ಎಂದರು.
"ನಾವು ಭೂಮಿಯ ಬೆಲೆಯೂ ಸೇರಿದಂತೆ ಒಟ್ಟು ಉತ್ಪಾದನೆಯ ವೆಚ್ಚದ  1.5 ಪಟ್ಟು ಹೆಚ್ಚು ಕನಿಷ್ಠ ಬೆಂಬಲ ಬೆಲೆಗಾಗಿ ಒತ್ತಾಯಿಸುತ್ತೇವೆ.ಸರ್ಕಾರ ತನ್ನ ಕಡೆಯ ಬಜೆಟ್ ನಲ್ಲಿ ಘೋಷಿಸಿದ್ದ ಕೊಡುಗೆಗಳು ನಮಗೆ ಸಹಕಾರಿಯಾಗಿಲ್ಲ" ಮಧ್ಯ ಪ್ರದೇಶ ರೈತ ಮುಖಂಡರಾದ  ಶಿವಕುಮಾರ್ ಕಾಕ್ಕ ಹೇಳಿದ್ದಾರೆ.
ಕಳೆದ ತಿಂಗಳಿನಲ್ಲಿ ಎಡಪಕ್ಷಗಳ ಮುಂದಾಳತ್ವದೊಡನೆ ಮಹಾರಾಷ್ಟ್ರ ರೈತರು ನಡೆಸಿದ್ದ ಸುದೀರ್ಘ ನಡಿಗೆ (ಪ್ರತಿಭಟನಾ ಮೆರವಣಿಗೆ) ಯನ್ನು ಅಭಿನಂದಿಸಿದ್ದ ಸಿನ್ಹಾ "ಸುಳ್ಳು ಭರವಸೆಗಳನ್ನು" ನೀಡುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು.
ಪ್ರಧಾನ ಮಂತ್ರಿ ಮೋದಿ ಕೇವಲ ಭರವಸೆ, ಗೊಷಣೆಗಳನ್ನು ಮಾಡುತ್ತಿದ್ದಾರೆ ರೈತರಿಗೆ ಸಹಾಯ ಮಾಡಲು ಸರ್ಕಾರ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ ಬಿಜೆಪಿ ಪ್ರಣಾಳಿಕೆಯಲ್ಲಿದ್ದ ರೈತರ ಪರವಾದ ಯಾವ ಭರವಸೆಯನ್ನೂ ಮೋದಿ ಸರ್ಕಾರ ಪೂರೈಸಿಲ್ಲ ಎಂದು ಸಿನ್ಹಾ ಆರೋಪಿಸಿದ್ದಾರೆ.
ಜೂನ್ 10ರ ಭಾರತ್ ಬಂದ್ ಗೆ ತಮಗೆ ಬೆಂಬಲ ನೀಡುವಂತೆ ದೇಶದ ವ್ಯಾಪಾರೀ ಸಂಘಟನೆಗಳಿಗೆ ರೈತರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com