ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿಯ ಜಗದಾಂಬಿಕ ಪಾಲ್, ಎನ್ ಆರ್ ಸಿಗೆ ವಿರೋಧ ವ್ಯಕ್ತಪಡಿಸುವುದೂ ದೇಶದ್ರೋಹಿಯಾಗಿರುವುದಕ್ಕೆ ಸಮನಾದದ್ದು ಎಂದು ಹೇಳಿದ್ದಾರೆ. ಮಮತಾ ಬ್ಯಾನರ್ಜಿ ರೀತಿಯಲ್ಲಿ ಸಾಮಾನ್ಯರು ಯಾರಾದರೂ ಹೇಳಿಕೆ ನೀಡಿದ್ದರೆ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕಾಗುತ್ತಿತ್ತು, ಆದರೆ ಅದೇ ಕಾನೂನು ಮಮತಾ ಬ್ಯಾನರ್ಜಿ ಅವರಿಗೇಕೆ ಅನ್ವಯವಾಗುವುದಿಲ್ಲ ಎಂದು ಪಾಲ್ ಪ್ರಶ್ನಿಸಿದ್ದಾರೆ.