ಎನ್ ಆರ್ ಸಿ ಸಂಬಂಧ ಅಮಿತ್ ಶಾ ಹೇಳಿಕೆ: ರಾಜ್ಯಸಭೆಯಲ್ಲಿ ಕೋಲಾಹಲ, ಸದನ ಮುಂದೂಡಿಕೆ

ಎನ್ ಆರ್ ಸಿ ಸಂಬಂಧ ಅಮಿತ್ ಶಾ ನೀಡುತ್ತಿದ್ದ ಹೇಳಿಕೆಯನ್ನು ವಿರೋಧ ಪಕ್ಷ ಕಾಂಗ್ರೆಸ್ ನಿರ್ಬಂಧಿಸಿದೆ. ಸಭಾಧ್ಯಕ್ಷ ವೆಂಕಯ್ಯನಾಯ್ಡು, ಸದನದಲ್ಲಿ ನಡೆದ ಗದ್ದಲ ...
ಅಮಿತ್  ಶಾ
ಅಮಿತ್ ಶಾ
ನವದೆಹಲಿ:  ಎನ್ ಆರ್ ಸಿ ಸಂಬಂಧ ಅಮಿತ್ ಶಾ ನೀಡುತ್ತಿದ್ದ ಹೇಳಿಕೆಯನ್ನು ವಿರೋಧ ಪಕ್ಷ ಕಾಂಗ್ರೆಸ್ ನಿರ್ಬಂಧಿಸಿದೆ. ಸಭಾಧ್ಯಕ್ಷ ವೆಂಕಯ್ಯನಾಯ್ಡು, ಸದನದಲ್ಲಿ ನಡೆದ ಗದ್ದಲ ಕೋಲಾಹಲಕ್ಕೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 
ನಿಜವಾದ ಭಾರತೀಯರನ್ನು ಎನ್ಆರ್ ಸಿಯಿಂದ ಕೈ ಬಿಟ್ಟಿಲ್ಲ, ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ರಾಜಕೀಯಗೊಳಿಸುತ್ತಿವೆ ಎಂಬ ಹೇಳಿಕೆಗೆ ಸದನದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು,. 
ನಿನ್ನೆಯ ಘಟನೆಗಳು ನನಗೆ ಅಸಮಾಧಾನ ಮೂಡಿಸಿವೆ,  ಕೆಲಸ ಸದಸ್ಯರು ಸದನದ ಬಾವಿಗೆ ಅಸಂಬಂದ್ಧವಾಗಿ ತೆರಳಿದರು. ಆ ರೀತಿಯ ಘಟನೆ ಮತ್ತು ಮರುಕಳಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ.  ಯಾರ ಹೆಸರನ್ನು ಹೇಳಲು ನಾನು ಬಯಸುವುದಿಲ್ಲ, ಸಭಾಧ್ಯಕ್ಷರಿಗೆ ಸದನವನ್ನು ಮುಂದೂಡುವ ಅಧಿಕಾರ ಇದೆ ಎಂದು ಹೇಳಿದ್ದಾರೆ.
ನಿನ್ನೆ  ಗದ್ದಲದಿಂದಾಗಿ ಅರ್ಧಕ್ಕೆ ನಿಂತಿದ್ದ ಅಮಿತಾ ಶಾ ತಮ್ಮ ಹೇಳಿಕೆಯನ್ನು ಮುಂದುವರಿಸಲು ಅವಕಾಶ ನೀಡಲಾಯಿತು.  ಈ ವೇಳೆ ಎದ್ದು ನಿಂತ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಒಂದು ವೇಳೆ ಅಮಿತ್ ಶಾಗೆ ಮಾತನಾಡದಲು ಅವಕಾಶಷ ನೀಡಿದರೇ ಸಭಾತ್ಯಾಗ ಮಾಡುವುದಾಗಿ ಹೇಳಿದರು. ಈ ವೇಳೆ ಮತ್ತೆ ಗದ್ದಲ ಆರಂಭವಾದ ಹಿನ್ನೆಲೆಯಲ್ಲಿ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com