ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ಟಿಎಂಸಿ ಸಂಸದರಿಗೆ ತಡೆ
ದೇಶ
ಎನ್ಆರ್ ಸಿ ವಿವಾದ: ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ಟಿಎಂಸಿ ಸಂಸದರಿಗೆ ತಡೆ
ರಾಷ್ಟ್ಪೀಯ ನಾಗರಿಕರ ನೋಂದಣಿ ವಿವಾದಕ್ಕೆ ಸಂಬಂಧಿಸಿದಂತೆ ಸಂತ್ರಸ್ಥರೊಂದಿಗೆ ಚರ್ಚಿಸಲು ಆಗಮಿಸಿದ್ದ 6 ಮಂದಿ ತೃಣಮೂಲ ಕಾಂಗ್ರೆಸ್ ಪಕ್ಷದ 6 ನಾಯಕರನ್ನು ತಡೆದು ವಿಮಾನ ನಿಲ್ದಾಣದಸ್ಸೇ ಗೃಹಬಂಧನದಲ್ಲಿಡಲಾಗಿದೆ.
ಸಿಲ್ಚಾರ್: ರಾಷ್ಟ್ಪೀಯ ನಾಗರಿಕರ ನೋಂದಣಿ ವಿವಾದಕ್ಕೆ ಸಂಬಂಧಿಸಿದಂತೆ ಸಂತ್ರಸ್ಥರೊಂದಿಗೆ ಚರ್ಚಿಸಲು ಆಗಮಿಸಿದ್ದ 6 ಮಂದಿ ತೃಣಮೂಲ ಕಾಂಗ್ರೆಸ್ ಪಕ್ಷದ 6 ನಾಯಕರನ್ನು ತಡೆದು ವಿಮಾನ ನಿಲ್ದಾಣದಸ್ಸೇ ಗೃಹಬಂಧನದಲ್ಲಿಡಲಾಗಿದೆ.
ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಟಿಎಂಸಿ ಸಂಸದ ಸುಖೇನ್ ಶೇಖರ್ ರಾಯ್ ನೇತೃತ್ವದ ನಿಯೋಗವನ್ನು ಅಸ್ಸಾಂ ಪೊಲೀಸರು ತಡೆದಿದ್ದಾರೆ. ಅಲ್ಲದೆ ಅವರನ್ನು ನಿಲ್ದಾಣದಲ್ಲೇ ಗೃಹಬಂಧನದಲ್ಲಿರಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಎನ್ಆರ್ ಸಿ ವಿಚಾರಕ್ಕೆ ಸಂಬಂಧಿಸಿದಂತೆ ತೃಣಮೂಲಕ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಅಸ್ಸಾಂನಲ್ಲಿ ಎನ್ ಆರ್ ಸಿ ವಿಚಾರ ಬೂದಿ ಮುಚ್ಚಿದ ಕೆಂಡಂತಿದ್ದು, ಪ್ರಸ್ತುತ ಆಗಮಿಸಿರುವ ಟಿಎಂಸಿ ನಾಯಕರಿಂದ ಮತ್ತೆ ಪ್ರಚೋದನಕಾರಿಯಾಗಬಹುದು ಎಂಬ ಕಾರಣಕ್ಕೆ ಪೊಲೀಸರು ಟಿಎಂಸಿ ನಾಯಕರನ್ನು ತಡೆದಿದ್ದಾರೆ ಎನ್ನಲಾಗಿದೆ.
ಕುಂಬಿಗ್ರಾಮ್ ವಿಮಾನ ನಿಲ್ದಾಣದಲ್ಲಿರುವ ವಿಐಪಿ ವಿಭಾಗದಲ್ಲಿ ಎಲ್ಲ ನಾಯಕರನ್ನು ಇರಿಸಲಾಗಿದೆ. ನಿನ್ನೆಯಷ್ಟೇ ಚಚರ್ ಜಿಲ್ಲಾಡಳಿತ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಮಾಡಿತ್ತು. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಗುಂಪು ಸೇರಿ ಮಾತನಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ನಾಯಕರೂ ಸೇರಿದಂತೆ ಎನ್ ಆರ್ ಸಿ ವಿಚಾರ ಸಂಬಂಧ ಯಾರು ಕೂಡ ಚರ್ಚೆ ಮಾಡಬಾರದು ಎಂದು ಆದೇಶ ಹೊರಡಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ