ವಸತಿ ನಿಲಯಗಳಲ್ಲಿ ಲೈಂಗಿಕ ಶೋಷಣೆ : ನಾಚಿಕೆಪಡುವಂತಹದ್ದು- ನಿತಿಶ್ ಕುಮಾರ್

ಬಿಹಾರ ರಾಜ್ಯದ ಮುಜಾಫರ್ ಪುರ್ ನಲ್ಲಿ ಸರ್ಕಾರದ ವಸತಿ ನಿಲಯಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ನಿತಿಶ್ ಕುಮಾರ್ ಮೌನ ಮುರಿದಿದ್ದಾರೆ.
ನಿತಿಶ್ ಕುಮಾರ್
ನಿತಿಶ್ ಕುಮಾರ್

ಮುಜಾಫರ್ ಪುರ್  :  ಬಿಹಾರ  ರಾಜ್ಯದ  ಮುಜಾಫರ್ ಪುರ್ ನಲ್ಲಿ  ಸರ್ಕಾರದ  ವಸತಿ ನಿಲಯಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ನಿತಿಶ್ ಕುಮಾರ್ ಮೌನ ಮುರಿದಿದ್ದಾರೆ.

ಇಂತಹ  ಪ್ರಕರಣಗಳು ಸರ್ಕಾರಕ್ಕೆ  ನಾಚಿಕೆಯನ್ನುಂಟು ಮಾಡುವಂತಿದ್ದು, ತಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದು ಪಾಟ್ನಾ ಹೈಕೋರ್ಟ್ ತನಿಖೆಯನ್ನು ನಿರ್ವಹಿಸಬೇಕು ಎಂದು  ನಿತಿಶ್ ಕುಮಾರ್ ಹೇಳಿದರು.

 ಸಂಸತ್ ಅಧಿವೇಶನ ಹಾಗೂ  ಬಿಹಾರ ಆಸೆಂಬ್ಲಿಯಲ್ಲಿ ಈ ವಿಚಾರ ಪ್ರತಿಧ್ವನಿಸಿದ ಬಳಿಕ ನಿತಿಶ್ ಕುಮಾರ್  ಇದೇ ಮೊದಲ ಬಾರಿಗೆ ಇಂತಹ ಹೇಳಿಕೆ ನೀಡಿದ್ದಾರೆ.ಯಾರೂ ಆತಂಕಪಡಬೇಕಾಗಿಲ್ಲ  ತಪಿಸ್ಥತರಸ್ಥರನ್ನು  ಶೀಘ್ರದಲ್ಲಿಯೇ ಪತ್ತೆ ಹಚ್ಚುವುದಾಗಿ ಅವರು ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿನ ಹಲವು ವಸತಿ ನಿಲಯಗಳಲ್ಲಿ ಖೈದಿಗಳ ಮೇಲಿನ ಲೈಂಗಿಕ  ಹಾಗೂ ದೈಹಿಕ ಕಿರುಕುಳ ಬಗ್ಗೆ ಟಾಟಾ ಸಾಮಾಜಿಕ ವಿಜ್ಞಾನಗಳ  ಸಂಸ್ಥೆಯಿಂದ ವರದಿ ಬಂದ ನಂತರ ಬಿಹಾರ ಸರ್ಕಾರ ಹಲವು ಪ್ರಕರಣಗಳನ್ನು ದಾಖಲಿಸಿದೆ.  ಮುಜಾಫರ್ ಪುರ್ ನ ವಸತಿ ನಿಲಯಗಳಲ್ಲಿ  ಅಪ್ರಾಪ್ತ ವಯಸ್ಸಿನ ಬಾಲಕಿರ ಮೇಲೆ  ಲೈಂಗಿಕ ಕಿರುಕುಳ ನಡೆದಿತ್ತು.
ವೈದ್ಯಕೀಯ ಮಾಹಿತಿ ಪ್ರಕಾರ 34 ಖೈದಿಗಳಲ್ಲಿ 29 ಖೈದಿಗಳ ಮೇಲೆ ಲೈಂಗಿಕ ಕಿರುಕುಳ ನಡೆದಿದೆ. ಈ  ಸಂಬಂಧ  ಸ್ವಯಂ ಸೇವಾ ಸಂಸ್ಥೆಯೊಂದರ ಮಾಲೀಕ ಸೇರಿದಂತೆ  10 ಜನರನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com