ವೈಮಾನಿಕ ಮಾರ್ಗದ ಮಧ್ಯೆ ಶೌಚಾಲಯದ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ತಮ್ಮ ಸುತ್ತಮುತ್ತಲು ಇರುವ ಮನೆಗಳಿಗೆ ಹಾನಿ ಉಂಟಾಗುತ್ತಿದೆ ಎಂದು ದೆಹಲಿಯ ನಿವಾಸಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಸತ್ವಂತ್ ಸಿಂಗ್ ಧಿಯಾ ಎನ್ ಜಿಟಿ ಮೆಟ್ಟಿಲೇರಿದ್ದರು. ಈ ವಿಚಾರಣೆ ನಡೆಸಿದ್ದ ಹಸಿರು ನ್ಯಾಯಾಧಿಕರಣ ಎಲ್ಲಾ ವಿಮಾನಗಳಿಗೂ ವೈಮಾನಿಕ ಮಾರ್ಗದ ಮಧ್ಯೆ ಶೌಚಾಲಯದ ತ್ಯಾಜ್ಯ ವಿಲೇವಾರಿ ಮಾಡದಂತೆ ಸೂಚನೆ ನೀಡಲು ಡಿಜಿಸಿಎ ಗೆ 2016 ರ ಡಿ.20 ರಂದು ಸೂಚನೆ ನೀಡಿತ್ತು. ಆದರೆ ವಿಮಾನದ ಶೌಚಾಲಯದಿಂದ ಮಾರ್ಗ ಮಧ್ಯದಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ವಾದಿಸಿದ್ದ ಡಿಜಿಸಿಎ, ಎನ್ ಜಿಟಿ ಆದೆಶವನ್ನು ಮರುಪರಿಶೀಲಿಸಬೇಕೆಂದು ಮನವಿ ಮಾಡಿತ್ತು. ಆದರೆ ಈಗ ಮತ್ತೆ ಡಿಜಿಸಿಎಯನ್ನು ತರಾಟೆಗೆ ತೆಗೆದುಕೊಂಡಿರುವ ಎನ್ ಜಿಟಿ ಕೂಡಲೇ ಎಲ್ಲಾ ವಿಮಾನಗಳಿಗೂ ಸುತ್ತೋಲೆ ಹೊರಡಿಸುವಂತೆ ಸೂಚಿಸಿದೆ.